ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮನೆಯಲ್ಲೇ ಇದ್ದ ಮಗುವನ್ನು ಸರಿಯಾಗಿ ಗಮನಿಸದೇ ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿ ಊರೆಲ್ಲಾ ಹುಡುಕಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆ.ಆರ್.ಪುರದ ಜನತಾ ಕಾಲೋನಿಯ ಮೀನಾ ದಂಪತಿ ಮನೆಯಲ್ಲೇ ಇದ್ದ ತಮ್ಮ 6 ವರ್ಷದ ಮಗಳಿಗಾಗಿ ಊರೆಲ್ಲಾ ಹುಡುಕಿದ್ದಾರೆ. ಕೊನೆಗೆ ಮನೆಗೆ ವಾಪಸ್ ಬಂದಾಗ ಗುಡ್ಡೆ ಹಾಕಿದ್ದ ಬಟ್ಟೆಗಳ ಅಡಿಯಲ್ಲಿ ತಮ್ಮ ಮಗಳು ಮಲಗಿರುವುದನ್ನು ಕಂಡು ಮೀನಾ ನಿಟ್ಟುಸಿರು ಬಿಟ್ಟಿದ್ದಾರೆ
ನನ್ನ ಮಗು ಕಿಡ್ನ್ಯಾಪ್ ಆಗಿದೆ ಎಂದು ಕೆ.ಆರ್.ಪುರ ಪೊಲೀಸ್ ಠಾಣೆಗೆ ಮೀನಾ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹುಡುಕಾಟ ಆರಂಭಿಸಿದರು. ಪೊಲೀಸರ ಜೊತೆ ಮಗಳಿಗಾಗಿ ಪೋಷಕರು ಅಕ್ಕಪಕ್ಕದ ಏರಿಯಾಗಳಲ್ಲೆಲ್ಲಾ ಹುಡುಕಾಟ ನಡೆಸಿದ್ದರು. ಕೊನೆಗೆ ಮಗು ಸಿಗಲಿಲ್ಲ ಎಂಬ ಆತಂಕದಲ್ಲೇ ಪೋಷಕರು ಮನೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಮನೆಯಲ್ಲೇ ಮಗು ನಿದ್ದೆ ಮಾಡುತ್ತಿರುವುದು ಅವರಿಗೆ ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post