ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮದನಿಕ ಚಿತ್ರದ ಶೂಟಿಂಗ್ ವೇಳೆ ಸಣ್ಣ ಅವಘಡ ಸಂಭವಿಸಿದ್ದು, ನಟಿ ರಾಗಿಣಿ ದ್ವಿವೇದಿ Actress Ragini Dwiwedi ಅವರ ಕಾಲಿಗೆ ಪೆಟ್ಟಾಗಿರುವ ಕುರಿತಾಗಿ ವರದಿಯಾಗಿದೆ.
ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಮದನಿಕ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಬೆಂಗಳೂರು ಸ್ಟುಡಿಯೋಸ್’ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ವೇಳೆ ರಾಗಿಣಿ ಕಾಲಿಗೆ ಪೆಟ್ಟಾಗಿದೆ. ವೈದ್ಯರ ಬಳಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಂದು ವಾರ ವಿಶ್ರಾಂತಿಗೆ ಸೂಚಿಸಲಾಗಿದೆ.


ಸಸ್ಪೆನ್ಸ್ ಥ್ರಿಲ್ಲರ್ ಜಾನರ್’ನ ಈ ಚಿತ್ರಕ್ಕೆ ಬೆಂಗಳೂರಿನ¯್ಲೆÃ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post