ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸುಂಕದ ಕಟ್ಟೆ ಖಾಸಗಿ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ನಾಗೇಶ್ ಎಂಬಾತ ಆಸಿಡ್ ದಾಳಿ Acid attack ನಡೆಸಿರುವ ಘಟನೆ ಇಂದು ನಡೆದಿದೆ.
ಯುವತಿ ತಂದೆ ಆಕೆಯನ್ನು ಬೈಕ್‌ನಲ್ಲಿ ಕಚೇರಿಗೆ ಬಿಟ್ಟು ತೆರಳಿದ ನಂತರ ಆಸಿಡ್ ದಾಳಿ ನಡೆಸಿದ್ದಾನೆ. ಕಳೆದ ೯ ತಿಂಗಳಿನಿಂದ ಪ್ರೀತಿಸುವಂತೆ ಯುವತಿ ಹಿಂದೆ ಬಿದ್ದಿದ್ದ ನಾಗೇಶ್, ಯುವತಿ ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕಚೇರಿ ಬಳಿ ಆಸಿಡ್ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸಿಡ್ ತೀವ್ರತೆಗೆ ಕಚೇರಿ ಬಳಿಯ ಗೋಡೆ ಹಾಗೂ ಮೆಟ್ಟಿಲುಗಳೆಲ್ಲ ಸುಟ್ಟುಕರಲಾಗಿದೆ. ದಾಳಿಯ ನಂತರ ನಾಗೇಶ್ ತಪ್ಪಿಸಿಕೊಂಡಿದ್ದು, ಆರೋಪಿ ಪತ್ತೆಗೆ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸೂಚನೆಯಂತೆ ವಿಶೇಷ ತಂಡ ರಚನೆ ಮಾಡಲಾಗಿದೆ.
Also read: ಐಎಎಸ್, ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆಡಳಿತಾತ್ಮಕ ಸಹಜ ಪ್ರಕ್ರಿಯೆ: ಸಿಎಂ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post