ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಚಿತ್ರರಂಗದ ನಂತರ ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದ ನಟ ಅನಿರುದ್ Anirudh ಅವರು ಈಗ ಮತ್ತೆ ಎಂಟ್ರಿ ಕೊಡಲು ಸಿದ್ದರಾಗಿದ್ದು, ಖ್ಯಾತ ನಿರ್ದೇಶಕ ಎಸ್. ನಾರಾಯಣ್ S Narayan ಅವರೊಂದಿಗೆ ಕಮಾಲ್ ಮಾಡಲಿದ್ದಾರೆ.
ಡಾ. ವಿಷ್ಣುವರ್ಧನ್ ಅಭಿನಯದಲ್ಲಿ ಬ್ಲಾಕ್ ಬಸ್ಟರ್, ಆಲ್ ಟೈಮ್ ಹಿಟ್ ಚಿತ್ರ ಸೂರ್ಯವಂಶವನ್ನು ಚಿತ್ರರಸಿಕರಿಗೆ ನೀಡಿದ್ದ ಎಸ್. ನಾರಾಯಣ್ ಈಗ ಇದೇ ಹೆಸರಿನಲ್ಲಿ ಧಾರವಾಹಿ ನಿರ್ದೇಶಿಸುತ್ತಿದ್ದು, ಅನಿರುದ್ ನಾಯಕರಾಗಿ ಕಿರುತೆರೆಯಲ್ಲಿ ಬರಲಿದ್ದಾರೆ.
ಸ್ವತಃ ಅನಿರುದ್ ಅವರು ಕಲ್ಪ ಮೀಡಿಯಾ ಹೌಸ್’ಗೆ ಹೊಸ ಧಾರಾವಾಹಿಯ ಫೋಟೋ ಶೂಟ್’ ಫೋಟೋಗಳನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲೂ ಸಹ ಇವು ವೈರಲ್ ಆಗಿವೆ.
ಈ ಕುರಿತಂತೆ ವಿಷಯ ಹಂಕೊಂಡಿರುವ ಅನಿರುದ್,’ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ಅವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ `ಸೂರ್ಯವಂಶ’ದಲ್ಲಿ Suryavamsha ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತದೆ ಅನ್ನೋ ಭರವಸೆ ನನಗಿದೆ’ ಎಂದಿದ್ದಾರೆ.
Also read: ಗುಜರಾತ್’ನಲ್ಲಿ ಬಿಜೆಪಿ ಪ್ರಚಂಡ ವಿಜಯ: ಡಿ.12ರಂದು ಸಿಎಂ ಭೂಪೇಂದ್ರ ಪಟೇಲ್ ಪ್ರಮಾಣ ವಚನ
ವೈಟ್ ಆಂಡ್ ವೈಟ್ ಪಂಚೆಯಲ್ಲಿ ಎಸ್. ನಾರಾಯಣ್ ಕಾಣಿಸಿಕೊಂಡಿದ್ದರೆ, ನೇರಳೆ ಬಣ್ಣದ ಸೂಟ್’ನಲ್ಲಿ ಅನಿರುದ್ ಮಿಂಚಿದ್ದಾರೆ. ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.
1999ರಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ಸೂರ್ಯವಂಶ ಚಿತ್ರವನ್ನು ಆಗ ಎಸ್. ನಾರಾಯಣ್ ನಿರ್ದೇಶಿಸಿದ್ದರು. ಬಾಕ್ಸ್ ಆಫೀಸಿನಲ್ಲಿ ಧೂಳೆಬ್ಬಿಸಿದ್ದ ಚಿತ್ರ, ಆಲ್ ಟೈಮ್ ಹಿಟ್ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈಗ ಅದೇ ಹೆಸರಿನ ಧಾರಾವಾಹಿ ಎಸ್. ನಾರಾಯಣ್ ನಿರ್ದೇಶನದಲ್ಲಿ ಕಿರುತೆರೆಗೆ ಬರುತ್ತಿರುವುದು ಭಾರೀ ನಿರೀಕ್ಷೆ ಮೂಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post