ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ತಮ್ಮ ವಿವಾದಾತ್ಮಕ ಹೇಳಿಕೆ ಹಾಗೂ ನಡೆಗಳಿಂದಲೇ ಸುದ್ದಿಯಾಗುವ ನಟ ಚೇತನ್ Actor Chethan ಅವರ ಸಾಗರೋತ್ತರ(ಒಸಿಐ) ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು, 15 ದಿನದೊಳಗೆ ಒಸಿಐ ಕಾರ್ಡನ್ನು ಹಿಂತಿರುಗಿಸಬೇಕು ಎಂದು ಸೂಚನೆ ನೀಡಲಾಗಿದೆ.
ಹಿಂದುತ್ವವನ್ನು ಪ್ರಶ್ನಿಸಿ ವಿವಾದಾತ್ಮಕ ಟ್ವೀಟ್ ಮಾಡಿದ್ದ ಚೇತನ್ ವಿರುದ್ಧ ಪ್ರಕರಣ ದಾಖಲಾಗಿ ಎ.14ರಂದು ಬೆಂಗಳೂರು ಪೊಲೀಸರು ಬಂಧಿಸಿದ್ದರು.

Also read: ಜಿಲ್ಲೆಯಲ್ಲಿಂದು ಎಷ್ಟು ನಾಮಪತ್ರ ಸಲ್ಲಿಕೆಯಾಯಿತು? ಯಾರೆಲ್ಲಾ ಸಲ್ಲಿಸಿದ್ದಾರೆ? ಇಲ್ಲಿದೆ ವಿವರ
ಭಾರತ ಬಿಡುವುದಿಲ್ಲ, ಸ್ಟೇ ತರ್ತೀನಿ
ಇನ್ನು, ವೀಸಾ ರದ್ದು ಮಾಡಿದ್ದರೂ ನಾನು ಭಾರತ ಬಿಡುವುದಿಲ್ಲ ಎಂದಿರುವ, ನೀಡಿರುವ 15 ದಿನದ ಒಳಗಾಗಿ ಸ್ಟೇ ತರುತ್ತೇನೆ ಎಂದು ನಟ ಚೇತನ್ ಹೇಳಿದ್ದಾರೆ.

ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ಕಳೆದ 10 ತಿಂಗಳ ಹಿಂದೆ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಿ, ನಿಮ್ಮ ವೀಸಾ ರದ್ದು ಮಾಡಬಹುದು ಎಂಬ ಶೋಕಾಸ್ ನೋಟಿಸ್ ನೀಡಿದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲಾ ದಾಖಲೆ ಸಲ್ಲಿಸಿ ಬಂದಿದ್ದೇನೆ ಎಂದಿದ್ದಾರೆ.









Discussion about this post