ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
500ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ನಟರಾಗಿ ಮಿಂಚಿದ್ದ ಹಿರಿಯ ನಟ ಮಂದೀಪ್ ರಾಯ್ Mandeep Roy ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಗರದ ಕಾವಲ್ ಭೈರಸಂದ್ರದಲ್ಲಿರುವ ನಿವಾಸದಲ್ಲಿ ತಡರಾತ್ರಿ 1:45ರ ಸುಮಾರಿಗೆ ಮಂದೀಪ್ ರಾಯ್ ಅಸುನೀಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದೆ ಚಿಕಿತ್ಸೆ ಪಡೆದು ಮರಳಿದ್ದರು.
ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ನಾಯಕ ನಟರ ಜೊತೆಗೆ ಬೆಳ್ಳಿಪರದೆ ಹಂಚಿಕೊಂಡಿದ್ದ ಮಂದೀಪ್ ರಾಯ್, ನಟ ಅನಂತ್‌ನಾಗ್, ಶಂಕರ್ ನಾಗ್ ಅವರ ಜೊತೆ ಸಿನಿಮಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದ್ದು, ಹಲವು ಗಣ್ಯರು ಸಂತಾಪ ಸೂಚಿಸಿದ್ಧಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















