ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತವಾಗಿ ಫೋರ್ಟಿಸ್ ಆಸ್ಪತ್ರೆಯು ಕನ್ನಿಂಗ್ ಹ್ಯಾಮ್ ಶಾಖೆಯಲ್ಲಿ ಎರಡನೇ “ಕ್ಯಾನ್ಸರ್ ಘಟಕ”ವನ್ನು ಪ್ರಾರಂಭಿಸಿದ್ದು, ನಟ ರಮೇಶ್ ಅರವಿಂದ್ ಅವರು ಈ ಘಟಕವನ್ನು ಮಂಗಳವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ನಟ ರಮೇಶ್ ಅರವಿಂದ್, ರೋಗದ ವಿರುದ್ಧ ಹೊರಾಡಲು ಸ್ಥೈರ್ಯ ಮುಖ್ಯ. ಅದು ಕ್ಯಾನ್ಸರ್ ಆದರೂ ಸರಿಯೇ, ಛಲವಿದ್ದರೆ ಎಂಥ ರೋಗವಾದರೂ ಗುಣಪಡಿಸಿಕೊಳ್ಳಬಹುದು. ಹೀಗಾಗಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವವರು ಅಂಜದೆ, ಹೋರಾಡಿ, ಉತ್ತಮ ಬದುಕಿನೊಂದಿಗೆ ಹಿಂತಿರುಗುತ್ತೀರಿ ಎಂದು ಆತ್ಮಸ್ಥೈರ್ಯ ತುಂಬಿದರು.

ಕನ್ನಿಂಗ್ಹ್ಯಾಮ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕ ತೆರೆದಿರುವುದು ಕ್ಯಾನ್ಸರ್ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ಕೇಂದ್ರವು ಗುಣಮಟ್ಟದ ಕ್ಯಾನ್ಸರ್ ಆರೈಕೆ ನೀಡುವ ಭರವಸೆ ಇದೆ. ಈ ಸೌಲಭ್ಯಗಳ ಲಾಭವನ್ನು ರೋಗಿಗಳು ಪಡೆದುಕೊಳ್ಳಲಿ ಎಂದರು.
ಫೋರ್ಟಿಸ್ ಆಸ್ಪತ್ರೆ ವಲಯ ನಿರ್ದೇಶಕರಾದ ಮನಿಷ್ ಮಟ್ಟು ಮಾತನಾಡಿ, ಬನ್ನೇರುಘಟ್ಟದ ಶಾಖೆಯಲ್ಲಿ ಫೋರ್ಟಿಸ್ ಕ್ಯಾನ್ಸರ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಈವರೆಗೂ ಸುಮಾರು 4 ಸಾವಿರ ಕ್ಯಾನ್ಸರ್ ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದ್ದೇವೆ. ಫೋರ್ಟಿಸ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ಸಿಟಿ ಸೆಂಟರ್ ಕ್ಯಾನ್ಸರ್ ಆಂಕೊಲಾಜಿ, ಸರ್ಜಿಕಲ್ ಆಂಕೊಲಾಜಿ ಮತ್ತು ಹೆಮಟೊ-ಆಂಕೊಲಾಜಿಗೆ ಹೆಚ್ಚಿನ ಗಮನವನ್ನು ನೀಡಿ ಕ್ಯಾನ್ಸರ್ ರೋಗಿಗಳ ವೈದ್ಯಕೀಯ ಅಗತ್ಯಗಳನ್ನು ಪೂರೈಸುತ್ತಿದ್ದೇವೆ. ಇದೀಗ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲೂ ಕ್ಯಾನ್ಸರ್ ಘಟಕ ತೆರೆಯಲಾಗಿದೆ ಎಂದರು.

ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಎರಡನೇ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಅನ್ನು ಪ್ರಾರಂಭಿಸುವುದು ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ, ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸಲು ಶ್ರಮಿಸಲಿದ್ದೇವೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news







Discussion about this post