ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿದ್ದ ಸ್ಯಾಂಡಲ್‌ವುಡ್ ನಟ ಸಂಚಾರಿ ವಿಜಯ್ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಅವರು ಬದುಕುವ ಸಾಧ್ಯತೆ ತೀರಾ ಕಡಿಮೆ ಎಂದು ವರದಿಯಾಗಿದೆ.
ಈ ಕುರಿತಂತೆ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನ್ಯೂರೋ ಸರ್ಜನ್ ಅರುಣ್ ನಾಯಕ್ ಅವರು, ಕಳೆದ 32 ಗಂಟೆಗಳಿಂದಲೂ ಡೀಪೆಸ್ಟ್ ಪಾಸಿಬಲ್ ಸ್ಥಿತಿಯಲ್ಲಿದ್ದು, ಅವರ ಮೆದುಳು ನಿಷ್ಕ್ರಿಯವಾಗಿದೆ. ಆದರೆ ಹೃದಯ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಉಸಿರಾಟದ ಸಾಮರ್ಥ್ಯವೂ ಸಹ ಕ್ಷೀಣವಾಗಿದೆ. ತೀರಾ ಘಾಸಿಕೊಂಡಿರುವ ಮೆದುಳಿನ ಭಾಗಕ್ಕೆ ಗರಿಷ್ಟ ಚಿಕಿತ್ಸೆ ನೀಡಲಾಗಿದೆ ಎಂದರು.
ಇನ್ನು ವಿಜಯ್ ಸೋದರ ಮಾತನಾಡಿದ್ದು, ವೈದ್ಯರ ಪ್ರಕಾರ ವಿಜಯ್ ಬದುಕುವ ಸಾಧ್ಯತೆ ತೀರಾ ಕಡಿಮೆ ಇದ್ದು, ಎಲ್ಲಾ ಭರವಸೆಗಳು ಇಲ್ಲವಾಗಿವೆ. ಹೀಗಾಗಿ ವಿಜಯ್ ಆಸೆಯಂತೆ ಅವರ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post