ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಸ್ವತಃ ಅದಿತಿ ಪ್ರಭುದೇವ ಅವರೇ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಷಯವನ್ನು ಖಚಿತಪಡಿಸಿದ್ದಾರೆ.
View this post on Instagram
ಹೌದು…ನಿಶ್ಚಿತಾರ್ಥ ಕುರಿತಾಗಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಷಯ ಬಹಿರಂಪಡಿಸಿರುವ ಅವರು, ದಾವಣಗೆರೆ ಮೂಲದ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರ ಜತೆಯಲ್ಲಿ ಒಂದು ಕನಸಿನಂತೆ ಈ ಕನಸು ನಿಜವಾಗಿದೆ ಹಾಗೂಹ್ಯಾಶ್‌ಟ್ಯಾಗ್ ಹಾಕಿ ಎಂಗೆಜ್ಡ್ ಎಂದು ಬರೆದುಕೊಂಡಿದ್ದಾರೆ.
ಡಿ.26ರ ಭಾನುವಾರ ಹೊಳೆನರಸೀಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಅಭಿಮಾನಿಗಳು ಸೇರಿದಂತೆ ಸಿನಿಮಾ, ಕಿರುತೆರೆಯ ಗಣ್ಯರು, ಆಪ್ತರು, ಗೆಳೆಯರು ಶುಭಾಶಯಗಳನ್ನು ಹೇಳುತ್ತಿದ್ದಾರೆ.
ಸೋಮವಾರ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡಿದ್ದವು. ಇದೀಗ ಸ್ವತಃ ನಟಿ ಅದಿತಿ ಅವರೇ ವಿಷಯ ಖಚಿತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post