ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ಪಠ್ಯಪುಸ್ತಕದಲ್ಲಿ ಭಗವದ್ಗೀತೆಯನ್ನು Bhagawathgeethe ಅಳವಡಿಸುವ ಕುರಿತಾಗಿ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದ್ದು, ಈ ವರ್ಷದಿಂದಲೇ ಇದು ಜಾರಿಯಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಮಾತನಾಡಿರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, Education Minister B C Nagesh ಪಠ್ಯದಲ್ಲಿ ನೀತಿ ಪಾಠಗಳನ್ನು ಅಳವಡಿಸುವ ಕುರಿತಾಗಿ ಬಹಳಷ್ಟು ಬೇಡಿಕೆಯಿದೆ. ಈ ಕುರಿತಂತೆ ಚಿಂತನೆ ನಡೆಸಲಾಗಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಶಿಕ್ಷಣ ತಜ್ಞರ ಜೊತೆಯ ಚರ್ಚಿಸಿ, ವರದಿ ಪಡೆದ ನಂತರ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಶಿಕ್ಷಣ ತಜ್ಞರ ತೀರ್ಮಾನವೇ ಈ ವಿಚಾರದಲ್ಲಿ ಬಹುತೇಕ ಅಂತಿಮವಾದುದು ಎಂದಿದ್ದಾರೆ.
Also read: ಮಾರ್ಚ್ 20ರಂದು ಶಿವಮೊಗ್ಗಕ್ಕೆ ರವಿಶಂಕರ್ ಗುರೂಜಿ ಭೇಟಿ
ಹಿಂದೆ ಇದ್ದಂತೆ ಭಗವದ್ಗೀತೆ, ಕುರಾನ್, ಬೈಬಲ್ ಸೇರಿದಂತೆ ಎಲ್ಲ ಗ್ರಂಥಗಳಲ್ಲಿರುವ ನೀತಿ ಪಾಠಗಳನ್ನು ಅಳವಡಿಸಲು ಸರ್ಕಾರಕ್ಕೆ ಸಲಹೆಗಳು ಬಂದಿವೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post