ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೃಷಿಕ ಸಮಾಜ ಜಿಲ್ಲಾ ಮಟ್ಟದಲ್ಲಿ ರೈತರ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸಬೇಕು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ Minister Chaluvarayaswamy ತಿಳಿಸಿದರು
ನಗರದ ಕೃಷಿ ಭವನದಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿಕ ಸಮಾಜ ರೈತರ ಪರವಾದ ಸಂಸ್ಥೆ ಹಾಗಾಗಿ ಅದರ ಮೂಲ ಆಶಯಕ್ಕೆ ತಕ್ಕಂತೆ ಕಾರ್ಯಕಾರಿ ಸಮಿತಿ ಕೆಲಸ ಮಾಡಬೇಕು. ಕೃಷಿಕ ಸಮಾಜದ ಸದಸ್ಯರ ನಡುವೆ ಪರಸ್ಪರ ಸಹಕಾರ ಸಮನ್ವಯ ಅಗತ್ಯ.ಯೋಜಿತವಾಗಿ ರಚನಾತ್ಮಕವಾಗಿ ಕೆಲಸ ಮಾಡಿ ಎಂದು ಸೂಚಿಸಿದರು.
ಕೃಷಿಕ ಸಮಾಜದ ಆಡಳಿತಾತ್ಮಕ ಸುಧಾರಣೆಗಾಗಿ ತಜ್ಞರ ಅಭಿಪ್ರಾಯ ಪಡೆದು ಸೇವಾ ನಿಯಮಗಳನ್ನು ಸರಿಯಾಗಿ ರೂಪಿಸಿ ಜಾರಿ ಗೊಳಿಸಬೇಕಿದೆ. ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಕೃಷಿಕ ಸಮಾಜದ ಚುನಾವಣೆ ನಿರ್ಧಾರವಾಗಲಿದೆ ಅದಕ್ಕೆ ಎಲ್ಲಾ ಸದಸ್ಯರು ಸಹಕರಿಸಬೇಕು ಎಂದರು.
ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಟಾರ್ಪಲ್’ಗಳ ಗುಣ ಮಟ್ಟ ವೃದ್ದಿಗೆ ಕ್ರಮ ವಹಿಸಲಾಗುವುದು. ಕೃಷಿಕ ಸಮಾಜಗಳ ಬಲ ವರ್ಧನೆಗೆ ಕೇಂದ್ರದಿಂದಲೂ ಹೆಚ್ಚುನ ನೆರವು ಒದಗುಸಲು ಪ್ರಸ್ತಾವನೆ ಕಳಿಸಲಾಗುವುದು. ರೈತರಿಗೆ 2500ಕೋಟಿರೂ ವರಗೆ ವಿಮೆ ಹಣ ದೊರೆಯುವ ಸಾಧ್ಯತೆ ಇದೆ .ಈಗಾಗಗಲೇ ಪ್ರಿವೆಂಟಿವ್ ಸೋಯಿಂಗ್ ಹಾಗೂ ಮಧ್ಯಂತರ ಪರಿಹಾರ. ಸೇರಿದಂತೆ 230 ಕೋಟಿ ರೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಕೇಂದ್ರದದಲೂ ಬರ ಪರಿಹಾರಕ್ಕೆ 18 ಸಾವಿರ ಕೋಟಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಈ ವರೆಗೆ ಯಾವುದೇ ಅನುದಾನ ಬಂದಿಲ್ಲ ಎಂದರು.
Also read: ರಾಜ್ಯೋತ್ಸವ, ಮಕ್ಕಳ ದಿನಾಚರಣೆ ರಸಪ್ರಶ್ನೆ | ಜೈನ್ ಪಬ್ಲಿಕ್ ಶಾಲೆಗೆ ಪ್ರಥಮ ಸ್ಥಾನ
ರೈತರ ವಿಚಾರದಲ್ಲಿ ರಾಜ್ಯ ಸರ್ಕಾರದ ಹಿಂದೆ ಮುಂದೆ ನೋಡುವ ಪ್ರಶ್ನೆ ಇಲ್ಲ .ಕೃಷಿಕರ ಹಿತ ಕಾಯಲು ಸದಾ ಸಿದ್ದ. ಫ್ರೋಟ್ಸ್ ಐಡಿ ಹಾಗೂ ಇ.ಕೆ.ವೈ.ಸಿ ಶೇ. 100 ನೊಂದಣಿಗೆ ಕೃಷಿಕ ಸಮಾಜಗಳೂ ಅರಿವು ಮೂಡಿದಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೃಷಿಕ ಸಮಾಜ ಕಟ್ಟಡಗಳ ನಿರ್ಮಾಣ ನಿರ್ವಹಣೆಗೆ ಅದ್ಯತೆ ಮೇರೆಗೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರ ಮನವಿಯಂತೆ ಜಿಲ್ಲೆ ಹಾಗೂ ತಾಲ್ಲೂಕು ಗಳಲ್ಲಿ ನಡೆಯುವ ಕೆ.ಡಿ.ಪಿ ಸಭೆಗಳಿಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕೃಷಿಕ ಸಮಾಜ ಅಧ್ಯಕ್ಷರನ್ನು ಆಹ್ವಾನಿಸುವಂತೆ ಕೋರಿ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಘಟಕಗಳ ಹೊಸ ಅಧ್ಯಕ್ಷರನ್ನು ಅಭಿನಂದಿಸಲಾಯಿತು. ಹಿಂದಿನ ಕಾರ್ಯಕಾರಿ ಸಮಿತಿ ಸಭೆ ನಡಾವಳಿ ಬಗ್ಗೆ ಚರ್ಚೆ ನಡೆಸಿ ಅಂಗೀಕರಿಸಲಾಯಿತು. ಹಿಂದಿನ ಸಂದರ್ಭಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಆಗಿರುವ ದುರ್ಬಳಕೆ, ಅವ್ಯವಹಾರಗಳ ಬಗ್ಗೆ ಕಾನೂನಿ ವ್ಯಾಪ್ತಿಯಲ್ಲಿ ತನಿಖೆ ನಡೆಸಿ ಕ್ರಮ ವಹಿಸಲು ಸಚಿವರು ಸೂಚನೆ ನೀಡಿದರು.
ಕೃಷಿ ಇಲಾಖೆಯ ನಿರ್ದೇಶಕರು ಕೃಷಿಕ ಸಮಾಜದ ಉಪಾಧ್ಯಕ್ಷರು ಆದ ಜಿ.ಟಿ. ಪುತ್ರ, ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್, ನೂತನ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಸಿ. ಪಾಪಣ್ಣ, ಕೃಷಿಕ ಸಮಾಜದ ಕಾರ್ಯದರ್ಶಿ ಜಯಸ್ವಾಮಿ, ಮಾಜಿ ಆಡಳಿತ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ನಾಮನಿರ್ದೇಶಿತ ಸದಸ್ಯರು ಹಾಗೂ ಸಭೆಯಲ್ಲಿ ಭಾಗವಹಿಸಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post