ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಎಐ ಯುವತಿಯ #AI Girl ಮೋಹಕ್ಕೆ ಬಿದ್ದು ಯುವಕನೊಬ್ಬ ಒಂದೂವರೆ ಲಕ್ಷ ರೂ. ಹಣವನ್ನು ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
26 ವರ್ಷದ ಯುವಕನೋರ್ವ ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದ. ಈ ಖಾತೆಗೆ ಯುವತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಬಳಿಕ ಮೊಬೈಲ್ ನಂಬರ್ ಶೇರ್ ಆಗಿ ಖಾಸಗಿ ವಿಚಾರಗಳನ್ನು ಚಾಟಿಂಗ್ ಮಾಡಿದ್ದರು.
ಕೆಲದಿನಗಳ ಹಿಂದೆ ಯುವತಿಯ ಮೊಬೈಲಿನಿಂದ ವಿಡಿಯೋ ಕಾಲ್ ಬಂದಿತ್ತು. ಆ ವಿಡಿಯೋ ಕಾಲ್‌ನಲ್ಲಿ ಎಐ ಯುವತಿಯನ್ನು ಬಳಸಿಕೊಂಡು ಯುವಕನ ಅಶ್ಲೀಲ ವೀಡಿಯೋ ರೆಕಾರ್ಡ್ ಮಾಡಿ, ಯುವಕನಿಂದ ಹಂತ ಹಂತವಾಗಿ 1.53 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಇನ್ನೂ ಹಣ ಕೇಳಿದಾಗ ಕೇಂದ್ರ ಸೆನ್ ಠಾಣೆಗೆ ಯುವಕ ದೂರು ನೀಡಿದ್ದಾನೆ.
ಪ್ರಾಥಮಿಕ ತನಿಖೆಯಲ್ಲಿ ಎಐ ಯುವತಿ ಮೂಲಕ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















