ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಶ್ವ ಅಮ್ಮಂದಿರ ದಿನಾಚರಣೆಗೆ, ಅಮ್ಮನಿಗೆ ಪ್ರಪಂಚದಷ್ಟೇ ಖುಷಿ ನೀಡುವ ಸಣ್ಣ ಮಟ್ಟದ ಪ್ರೀತಿ ಮತ್ತು ಅಕ್ಕರೆ ತೋರಿಸುವಂತೆ ಸಂದೇಶ ನೀಡುವ ಅಮೃತ್ ನೋನಿಯ Amrith Noni ಕಿರುಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ಕತ್ ಟ್ರೆಂಡ್ ಅಗಿದೆ. ಟ್ವೀಟರ್ ನಲ್ಲಿ ದೇಶದಲ್ಲೇ 6ನೇ ಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆಯುವಲ್ಲಿ ಸಫಲವಾಗಿದೆ.
ಪ್ರಕೃತಿದತ್ತವಾಗಿ ಸಿಗುವ ದಿವ್ಯಔಷಧ ನೋನಿಯ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರುಕಟ್ಟೆಯಲ್ಲಿ ದೇಶದಲ್ಲೇ ಪ್ರಮುಖ ಬ್ರಾಂಡ್ ಅಮೃತ್ ನೋನಿ, ಈ ಬಾರಿಯ ವಿಶ್ವ ಅಮ್ಮಂದಿರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ, ಅಮ್ಮಂದಿರಿಗೆ ಅತ್ಯಂತ ಇಷ್ಟವಾಗುವ ಸಣ್ಣ ಮಟ್ಟದ ಪ್ರೀತಿ ಮತ್ತು ಅಕ್ಕರೆಯನ್ನು ತೋರಿಸುವಂತೆ ಕರೆ ನೀಡುವ ಕಿರುಚಿತ್ರವನ್ನು ನಿರ್ಮಿಸಿತ್ತು.
ಅಮ್ಮ ಎಂದರೆ ವ್ಯಕ್ತಿತ್ವಕ್ಕೂ ಮೀರಿದ ಶಕ್ತಿ. ಆಕೆಯ ತ್ಯಾಗ, ಅಮ್ಮ ನೀಡಿರುವ ಪ್ರೀತಿ, ಅಕ್ಕರೆ, ಮಮಕಾರ, ವಾತ್ಸಲ್ಯ ಕರುಣೆ ಎಲ್ಲವೂ ಶ್ರೇಷ್ಠ. ಆಕೆ ಪ್ರಪಂಚದಲ್ಲಿ ಅತಿ ಹೆಚ್ಚು ಇಷ್ಟಪಡುವುದು ತನ್ನ ಮಕ್ಕಳ ಪ್ರೀತಿ. ಆಧುನಿಕ ಪ್ರಪಂಚದಲ್ಲಿ ಎಲ್ಲರೂ ತಮ್ಮ ಕೆಲಸಗಳಲ್ಲಿ ಮಗ್ನರಾಗುವ ಮೂಲಕ ತಮ್ಮ ಪೋಷಕರನ್ನ ನಿರ್ಲಕ್ಷಿಸುವ ಪ್ರಮೇಯಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಕ್ಕಳ ಜೀವನ ರೂಪಿಸುವ ನಿಟ್ಟಿನಲ್ಲಿ ತನ್ನ ಜೀವನ ಮುಡುಪಾಗಿಡುವ ತಾಯಿ ಬಯಸುವುದು ಮಕ್ಕಳ ಸಣ್ಣ ಮಟ್ಟದ ಪ್ರೀತಿ ಮತ್ತು ಆರೈಕೆ. ಇದನ್ನು ಯುವ ಜನರಿಗೆ ಮನಗಾಣಿಸುವ ನಿಟ್ಟಿನಲ್ಲಿ ಈ ಕಿರುಚಿತ್ರವನ್ನು ನಿರ್ಮಿಸಿದ್ದೇವೆ ಎಂದು ಅಮೃತ್ ನೋನಿ ಸಂಸ್ಥೆಯ ಮಾರುಕಟ್ಟೆಯ ನಿರ್ದೇಶಕರಾದ ನಾರಾಯಣ್ ತಿಳಿಸಿದ್ದಾರೆ.
ನಮ್ಮ ಸಂಸ್ಥೆಯಲ್ಲಿ ಮಹಿಳೆಯರಿಗೆ ಅದರಲ್ಲೂ ಅಮ್ಮಂದಿರಿಗೆ ಉತ್ತಮ ಅವಕಾಶಗಳು ಮತ್ತು ಸೌಲಭ್ಯಗಳನ್ನು ಕಲ್ಪಿಸಿದ್ದೇವೆ. ಅಮ್ಮಂದಿರ ಪ್ರೀತಿಯೇ ನಮ್ಮ ಸಂಸ್ಥೆಯನ್ನ ಈ ಎತ್ತರಕ್ಕೆ ಬೆಳೆಸಿದೆ ಎಂದು ವಾಲ್ಯೂ ಪ್ರೊಡಕ್ಟ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶ್ರೀನಿವಾಸ್ ಮೂರ್ತಿ ತಿಳಿಸಿದರು.
ಅಮ್ಮಂದಿರ ದಿನಕ್ಕೆ ವಿಶೇಷವಾಗಿ ನಿರ್ಮಿಸಲಾಗಿರುವ ಈ ಕಿರುಚಿತ್ರಕ್ಕೆ ಎಲ್ಲಾ ವಲಯಗಳಿಂದಲೂ ಬಹಳಷ್ಟು ಪ್ರಶಸಂಸೆ ವ್ಯಕ್ತವಾಗಿದ್ದು ನಮ್ಮ ಪ್ರಯತ್ನಕ್ಕೆ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post