ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಪಂಚಾಯತ್ ರಾಜ್ ದಿವಸ್ ಆಚರಣೆಯ ಅಂಗವಾಗಿ ಇಂದು ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವರ್ಚುಯಲ್ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಎರಡು ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಬೆಂಗಳೂರು ಪೂರ್ವ ತಾಲ್ಲೂಕು ಪಂಚಾಯತ್‌ಗೆ, ಪಂಡಿತ್ ದೀನ ದಯಾಳ್ ಉಪಾಧ್ಯಾಯ ಪಂಚಾಯತ್ ರಾಜ್ ಸಶಕ್ತೀಕರಣ ಪ್ರಶಸ್ತಿ, ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ರಾಜಾನಕುಂಟೆ ಗ್ರಾಮ ಪಂಚಾಯತ್‌ಗೆ, ಗ್ರಾಮಪಂಚಾಯತ್ ಅಭಿವೃದ್ಧಿ ಯೋಜನೆ (ಜಿಪಿಡಿಪಿ) ಸಿದ್ಧತೆ ಹಾಗೂ ಅನುಷ್ಠಾನ ಪ್ರಶಸಿ. ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಲವಾರು ಪ್ರಶಸ್ತಿಗಳನ್ನು ಪ್ರಧಾನ ನರೇಂದ್ರ ಮೋದಿ ಘೋಷಿಸಿದರು.
ಪ್ರಶಸ್ತಿ ಪ್ರಕಟಿಸಿದ ಪ್ರಧಾನ ಮಂತ್ರಿ ಅವರಿಗೆ ಹಾಗೂ ಪ್ರಶಸ್ತಿಗೆ ಭಾಜನರಾದವರಿಗೆ, ಪ್ರಶಸ್ತಿ ಪಲಭಿಸಲು ಶ್ರಮಿಸಿದ ಎಲ್ಲ ಹಿರಿಯ ಕಿರಿಯ ಅಧಿಕಾರಿ ವೃಂದಕ್ಕೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅಭಿನಂದಿಸಿದ್ದಾರೆ.
ಪ್ರಶಸ್ತಿ ವಿವರ:
ದೀನ್‌ದಯಾಳ್ ಉಪಾಧ್ಯಾಯ ಪಂಚಾಯತ್ ಸಶಕ್ತೀಕರಣ ಪುರಸ್ಕಾರ:
ಹಾಸನ ಜಿಪಂ, ಪಾಂಡವಪುರ ತಾಪಂ, ಬೆಂಗಳೂರು ಪೂರ್ವ ತಾಪಂ, ತುಮ್ಮಿನಕಟ್ಟಿ ಗ್ರಾಪಂ, ಯಡಗನಹಳ್ಳಿ ಗ್ರಾಪಂ, ಕರ್ಣಕುಪ್ಪೆ ಗ್ರಾಮ.
ನಾನಾಜಿ ದೇಶ್‌ಮುಖ್ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ:
ಹೆಮ್ಮನಹಳ್ಳಿ ಗ್ರಾಮ ಪಂಚಾಯತಿ
ನಮ್ಮ ಗ್ರಾಮ ನಮ್ಮ ಯೋಜನೆ ಪುರಸ್ಕಾರ
ರಾಜನಕುಂಟೆ ಗ್ರಾಪಂ
ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ್ ಪುರಸ್ಕಾರ
ಮುನುಗನಹಳ್ಳಿ ಗ್ರಾಮ ಪಂಚಾಯತ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post