ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೊರೋನಾ ಉಂಟು ಮಾಡಿರುವ ಆರ್ಥಿಕ ಸಂಕಷ್ಟ ಹಾಗೂ ಬೆಲೆ ಏರಿಕೆಯ ಬಿಸಿ ನಡುವೆ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಲು ರೆಡಿಯಾಗಿದೆ. ಏನೆಂದು ಯೋಚಿಸುತ್ತಿದ್ದೀರಾ?
ಹೌದು… ರಾಜ್ಯ ಸರ್ಕಾರ ಆಟೋ ರಿಕ್ಷಾ ಪ್ರಯಾಣ ದರ ಏರಿಕೆ ಮಾಡಲು ಉದ್ದೇಶಿಸಿದೆ. ಕಳೆದ 8 ವರ್ಷಗಳಿಂದ ಬೆಲೆ ಹೆಚ್ಚಳ ಮಾಡದಿರುವುದರ ಪರಿಣಾಮ ಚಾಲಕರು ಕಂಗಲಾಗುವಂತಾಗಿದೆ. ಆಟೋರಿಕ್ಷಾ ಬಾಡಿಗೆಯನ್ನೆ ಆಧಾರಿಸಿ ಜೀವನ ನಡೆಸುತ್ತಿರುವ ಕುಟುಂಬಗಳು ತೀವ್ರ ಸಂಕಷ್ಟದಲ್ಲಿದೆ ಎಂದು ಆಟೋ ರಿಕ್ಷಾ ಒಕ್ಕೂಟದ ಸದಸ್ಯರು ಸರ್ಕಾರಕ್ಕೆ ತಮ್ಮ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
2013ರಲ್ಲಿ ಆಟೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಕಳೆದ 8 ವರ್ಷಗಳ ಅವಧಿಯಲ್ಲಿ ಗ್ಯಾಸ್, ಬಸ್ ಪ್ರಯಾಣ ದರ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೆ ಆಟೋ ದರ ಹೆಚ್ಚಳ ಮಾಡದೆ ಸಾರಿಗೆ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂಬುದು ಆಟೋ ಚಾಲಕರ ಅಳಲು. ಆಟೋ ರಿಕ್ಷಾ ಒಕ್ಕೂಟಗಳು ದರ ಏರಿಕೆಗೆ ಮನವಿ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಪ್ರತಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 43.5 ಪೈಸೆಯಷ್ಟು ಹೆಚ್ಚಳ ಮಾಡುವ ಮೂಲಕ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಎಲ್‌ಪಿಜಿ ಗ್ಯಾಸ್ ವಾಣಿಜ್ಯ ಬಳಕೆದಾರರಿಗೆ ಶಾಕ್ ನೀಡಿವೆ. ಪ್ರತಿ ತಿಂಗಳಿಗೊಮ್ಮೆ ತೈಲ ಕಂಪನಿಗಳು ದರ ಪರಿಷ್ಕರಣೆ ಮಾಡುತ್ತಿದ್ದು, ಅಕ್ಟೋಬರ್ ಮೊದಲ ವಾರದಲ್ಲೇ ಹಣ ದುಬ್ಬರದಲ್ಲಿ ಹಿನ್ನೆಡೆ ಉಂಟಾದ ಕಾರಣ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಹೆಚ್ಚಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಹೆಚ್ಚಳ ಮಾಡಿರುವುದರಿಂದ ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ದರ 1693 ರೂ.ಗಳಿಂದ 1,736.5 ಪೈಸೆಗೆ ಏರಿಕೆಯಾಗಿದೆ.
ಕಳೆದ ತಿಂಗಳು ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ದರವನ್ನು ೨೫ ರೂ.ಗಳಿಗೆ ಹೆಚ್ಚಿಸಿದ್ದವು. ಆದರೆ, ಇಂದು ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರವನ್ನು ಹೆಚ್ಚಳ ಮಾಡಿಲ್ಲ. ಹೀಗಾಗಿ ಗ್ರಾಹಕರು ನಿರಾಳರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post