ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜಧಾನಿಯ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು ಜ.26 ಮತ್ತು 27ರಂದು ಸಂತ ಶ್ರೀ ತ್ಯಾಗರಾಜ ಸ್ವಾಮಿಗಳ ಮತ್ತು ಶ್ರೀ ಪುರಂದರದಾಸರ ಆರಾಧನಾ ಸಂಗೀತೋತ್ಸವ ಹಮ್ಮಿಕೊಂಡಿದೆ.
ನಗರದ ಬಸವನಗುಡಿಯಲ್ಲಿರುವ ಉಡುಪಿ ಶ್ರೀಮನ್ ಮಧ್ವಾಚಾರ್ಯ ಮಹಾ ಸಂಸ್ಥಾನ ಪುತ್ತಿಗೆ ಮಠದ (ಗೋವರ್ಧನ ಗಿರಿ ದೇಗುಲ) ಸಭಾಂಗದಲ್ಲಿ 26ರ ಸಂಜೆ 4ಕ್ಕೆ ಉತ್ಸವಚು ಕಿರಿಯ ವಿದ್ಯಾರ್ಥಿಗಳ ಹರಿದಾಸರ ದೇವರನಾಮ ಗೋಷ್ಠಿ ಗಾಯನದಿಂದ ವಿಧ್ಯುಕ್ತವಾಗಿ ಚಾಲನೆ ಗೊಳ್ಳಲಿದೆ. ಸಂಜೆ 5.45 ರಿಂದ ವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸಲಿದ್ದಾರೆ.

ಸಂಕೀರ್ತನ ಉತ್ಸವ:
27ರ ಬೆಳಗ್ಗೆ 7.30 ಕ್ಕೆ ಗೋವರ್ಧನ ಗಿರಿಯ ಶ್ರೀ ಕೃಷ್ಣ ದೇವರಿಗೆ ದೇವರನಾಮಗಳ ಸಂಕೀರ್ತನ ಉತ್ಸವ ಸಮರ್ಪಣೆಯಾಗಲಿದೆ. 8.30ರಿಂದ ಹಿರಿಯ ವಿದ್ಯಾರ್ಥಿಗಳು ಶಾಸ್ತ್ರೀಯ ಸಂಗೀತ ಗಾಯನ ನೆರವೇರಲಿದೆ.
Also read: ಅಯೋಧ್ಯೆ ಬಾಲರಾಮನನ್ನು ಇನ್ಮುಂದೆ ಈ ಹೆಸರಿನಿಂದ ಕರೆಯಲಾಗುತ್ತದೆ! ಏನಿದರ ವಿಶೇಷ?
ಬೆಳಗ್ಗೆ 9.30ಕ್ಕೆ ಶ್ರೀ ತ್ಯಾಗರಾಜ ಸ್ವಾಮಿಗಳ ‘ಘನರಾಗ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ’ ಸಂಪನ್ನಗೊಳ್ಳಲಿದೆ. ಹಿರಿಯ ಗಾಯಕರು, ವಿದ್ವಾಂಸರು ಏಕ ಕಂಠದಲ್ಲಿ ಪಂಚರತ್ನ ಕೃತಿಗಳನ್ನು ಹಾಡಲಿರುವುದು ವಿಶೇಷ.

ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಪ್ರಕಟಿಸಿರುವ, ಹರಿದಾಸರ ಪ್ರಚಲಿತ ದೇವರನಾಮಗಳ ಪುಸ್ತಕ ‘ಭಕ್ತಿ ಸನ್ನುತಿ- ಭಾಗ 2’ ಲೋಕಾರ್ಪಣೆ 27ರ ಬೆಳಗ್ಗೆ 11.30ಕ್ಕೆ ನೆರವೇರಲಿದೆ. ಉಡುಪಿ ಭಂಡಾರಕೇರಿ ಮಹಾ ಸಂಸ್ಥಾನ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭ ಖ್ಯಾತ ಅಧ್ಯಾತ್ಮ ಪ್ರವಚನಕಾರ, ಪಂಡಿತ ಪವಮಾನಾಚಾರ್ ಕಲ್ಲಾಪುರ, ನಾಡಿನ ಹಿರಿಯ ಮೃದಂಗ ವಿದ್ವಾಂಸ ಎಚ್.ಎಸ್. ಸುಧೀಂದ್ರ ಖ್ಯಾತ ತಬಲಾ ವಾದಕ ಪಂಡಿತ್ ಗುರುಮೂರ್ತಿ ವೈದ್ಯ ಅವರಿಗೆ ಸನ್ಮಾನಿಸಲಾಗುವುದು. ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಜೆ 4ಕ್ಕೆ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಹರಿದಾಸರ ದೇವರನಾಮ ಗೋಷ್ಠಿ ಗಾಯನವಿದೆ. 5ಕ್ಕೆ ದೇವರನಾಮ ಉಚಿತ ಕಲಿಕಾ ಶಿಬಿರದ ಸಮಾರೋಪ ಸಮಾರಂಭ ನೆರವೇರಲಿದೆ. ಶಿಬಿರದಲ್ಲಿ ರಾಮದೇವರ ಕುರಿತಾದ ದೇವರನಾಮಗಳನ್ನು ಕಲಿತ ನೂರಾರು ನಾಗರಿಕರು ಸಾಮೂಹಿಕ ಗಾಯನ ಪ್ರಸ್ತುತಿ ಮಾಡಲಿದ್ದಾರೆ. ಖ್ಯಾತ ವಾಗ್ಮಿ, ಪಂಡಿತ ಪವಮಾನಾಚಾರ್ಯ ಕಲ್ಲಾಪುರ ಅವರು ಪ್ರವಚನ ನೀಡಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post