Wednesday, July 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಬೆಂಗಳೂರು ನಗರ

ಮಹಿಳೆಯರಿಗೆ ಸಮಾನ ಅವಕಾಶ ನೀಡದಿದ್ದಲ್ಲಿ ಆತ್ಮನಿರ್ಭರತೆ ಸಾಧ್ಯವಿಲ್ಲ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

March 9, 2022
in ಬೆಂಗಳೂರು ನಗರ
0 0
0
Image courtesy: Internet

Image courtesy: Internet

Share on facebookShare on TwitterWhatsapp
Read - 4 minutes

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |

ತಂತ್ರಜ್ಞಾನದ ಸಮರ್ಪಕ ಬಳಕೆ ಮೂಲಕ ಆತ್ಮನಿರ್ಭರತೆಗೆ ಒತ್ತು ನೀಡಲಾಗುವುದು. ಈ ಬಜೆಟ್ ನಲ್ಲಿ ಅಂಥ ಪ್ರಯತ್ನ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ Central Minister Nirmala Seetharaman ತಿಳಿಸಿದರು.

ನಗರದ “ಜೆ.ಡಬ್ಲ್ಯು ಮೆರಿಯೋಟ್ ಹೋಟೆಲ್”ನಲ್ಲಿ ಇಂದು ಸಂವಾದ ಕಾರ್ಯಕ್ರಮದಲ್ಲಿ “ಆತ್ಮನಿರ್ಭರ ಅರ್ಥವ್ಯವಸ್ಥೆಯ ಭಾರತ” ವಿಷಯದ ಕುರಿತು ಅವರು ಮಾತನಾಡಿದರು.

ಸ್ಥಳೀಯವಾಗಿ ಉತ್ಪಾದಿಸಿ ವಿಶ್ವಕ್ಕೆ ಸರಬರಾಜು ಮಾಡುವ ಚಿಂತನೆಯೊಂದಿಗೆ ಆತ್ಮನಿರ್ಭರತೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕೋವಿಡ್ ಲಸಿಕೆ Covid Vaccination ವಿವರವನ್ನು ಆ್ಯಪ್ ಮೂಲಕ ಪಡೆಯುವ ಪದ್ಧತಿಯನ್ನು ಜಾರಿಗೊಳಿಸಲಾಗಿದೆ ಎಂದರು.

75 ಡಿಜಿಟಲ್ ಬ್ಯಾಂಕ್ ಸ್ಥಾಪನೆ, ಡಿಜಿಟಲ್ ಕರೆನ್ಸಿ, ದೂರ ಶಿಕ್ಷಣ ವಿಶ್ವವಿದ್ಯಾಲಯ ಮಾತ್ರವಲ್ಲದೆ ಡಿಜಿಟಲ್ ಯುನಿವರ್ಸಿಟಿ, ಇ ಪಾಸ್‍ಪೋರ್ಟ್ ಮೊದಲಾದವುಗಳ ಮೂಲಕ ಭಾರತವನ್ನು ಬ್ರ್ಯಾಂಡೆಡ್ ಆಗಿ ಬದಲಾಯಿಸಲಾಗುತ್ತಿದೆ ಎಂದು ವಿವರಿಸಿದರು.

ಸಾವಿರ ಪುರುಷರಿಗೆ 900ರ ಆಸುಪಾಸಿನಲ್ಲಿದ್ದ ಮಹಿಳೆಯರ ಸಂಖ್ಯೆ ಇದೀಗ 1026ಕ್ಕೆ ಹೆಚ್ಚಾಗಿದೆ. ಈ ಅನುಪಾತವೇ ನಮ್ಮ ಸಾಧನೆಯ ಪ್ರತಿಬಿಂಬ. ಉನ್ನತ ಶಿಕ್ಷಣದಲ್ಲೂ ಮಹಿಳಾ ಸಂಖ್ಯೆ ತೀವ್ರ ಹೆಚ್ಚಳ ಕಂಡಿದೆ. ಎನ್‍ಸಿಸಿ, ಸೇನೆ ಸೇರಿ ರಕ್ಷಣಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ಸಿಗುತ್ತಿದೆ ಎಂದು ತಿಳಿಸಿದರು. ಹೆರಿಗೆ ಸಂಬಂಧ ರಜೆಯನ್ನು 12 ವಾರದಿಂದ 26 ವಾರಕ್ಕೆ ಏರಿಸಲಾಗಿದೆ ಎಂದರು.

ತಂತ್ರಜ್ಞಾನವನ್ನು ಉತ್ತಮ ಜೀವನಕ್ಕಾಗಿ ಬಳಸಲಾಗುತ್ತಿದೆ. 12 ವರ್ಷದೊಳಗಿನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದವರಿಗೆ ಮರಣದಂಡನೆ ನೀಡುವಂತೆ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದೇವೆ. 16 ವರ್ಷದೊಳಗಿನ ಯುವತಿ ಮೇಲೆ ಅತ್ಯಾಚಾರ ಮಾಡಿದವರಿಗೆ ಹಿಂದೆ 10 ವರ್ಷ ಶಿಕ್ಷೆ ಇದ್ದುದನ್ನು 20 ವರ್ಷಕ್ಕೆ ಏರಿಸಲಾಗಿದೆ. ಕೃಷಿ ಪದ್ಧತಿ ಸುಧಾರಣೆಗೆ ತಂತ್ರಜ್ಞಾನ ಬಳಸಲಾಗುವುದು ಎಂದು ತಿಳಿಸಿದರು.

ಶೇ 50ರಷ್ಟಿರುವ ಮಹಿಳೆಯರಿಗೆ ಸಮಾನ ಅವಕಾಶ ಕೊಡದಿದ್ದರೆ ಆತ್ಮನಿರ್ಭರತೆ ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರಿಗೆ ರಕ್ಷಣೆ, ಹೆಚ್ಚು ಅವಕಾಶ ಕೊಡಲು ಮುಂದಾಗಿದ್ದೇವೆ. 2014ರಲ್ಲಿ ಪಂಚಾಯತ್ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರಿಗೆ ಶೇ 36 ಹೆಚ್ಚಿನ ಅವಕಾಶ ಕಲ್ಪ್ಪಿಸಲಾಯಿತು. ಆದರೆ, ಮೋದಿಯವರ ಸೂಚನೆಯಂತೆ ಗುಜರಾತ್ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಶೇ 50ರಷ್ಟು ಮಹಿಳೆಯರಿಗೆ ಅವಕಾಶ ಕೊಡಲಾಗಿದೆ. ಪಂಚಾಯತ್‍ಗೆ ಮಹಿಳೆಯರನ್ನೇ ಅವಿರೋಧವಾಗಿ ಆಯ್ಕೆ ಮಾಡಿದರೆ ಹೆಚ್ಚುವರಿ ಅನುದಾನ ಕೊಡುವುದಾಗಿ ಮೋದಿಯವರು ಪ್ರಕಟಿಸಿದ್ದಾರೆ. ಈಗ ಮಹಿಳಾ ಆಡಳಿತದ ಪ್ರಮಾಣ ಶೇ 46ಕ್ಕೆ ಏರಿಕೆ ಕಂಡಿದೆ ಎಂದರು.

ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡಿದ್ದೇವೆ. ಸಾಂಕ್ರಾಮಿಕದ ಅವಧಿಯಲ್ಲೂ ಆತ್ಮನಿರ್ಭರತೆಯ ತತ್ವವನ್ನು ಜಾರಿಗೊಳಿಸಿದ್ದೇವೆ. ಆರಂಭದಲ್ಲಿ ಒಂದೆಡೆ ಮಾಸ್ಕ್, ಪಿಪಿಇ ಕಿಟ್, ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಂಡು ಬಿಕ್ಕಟ್ಟನ್ನು ನಿಭಾಯಿಸಿದ ಸರಕಾರವು, ಸ್ಥಳೀಯವಾಗಿ ಅವುಗಳ ಉತ್ಪಾದನೆ ಸಾಧ್ಯತೆ ಕಡೆಗೂ ಗಮನ ಹರಿಸಿತು. ಈ ಉಪಕರಣಗಳ ಜೊತೆ ಆಮ್ಲಜನಕ ಉತ್ಪಾದನೆ, ಆಸ್ಪತ್ರೆಗಳ ಸೌಕರ್ಯ ಹೆಚ್ಚಳಕ್ಕೂ ಗಮನ ನೀಡಲಾಯಿತು.. ಉತ್ಪಾದನೆ ಹೆಚ್ಚಳದ ಮೂಲಕ ಉದ್ಯೋಗಾವಕಾಶವನ್ನೂ ಹೆಚ್ಚಿಸಲಾಗಿದೆ ಎಂದು ವಿವರಿಸಿದರು.

ಭಾರತದಲ್ಲಿ ಸಿಗುವ ವಸ್ತುವಿಗೆ ಕಡಿಮೆ ಸುಂಕ ಮತ್ತು ಅದೇ ವಸ್ತು ಆಮದಾಗುತ್ತಿದ್ದರೆ ಹೆಚ್ಚು ತೆರಿಗೆ ಎಂಬ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಆದರೆ, ಇಲ್ಲಿ ಅವಶ್ಯವಾಗಿ ಬೇಕಾದ ಹಾಗೂ ಆಂತರಿಕವಾಗಿ ಉತ್ಪಾದಿಸಲಾಗದ ವಸ್ತುಗಳಿಗೆ ಹೆಚ್ಚು ತೆರಿಗೆ ವಿಧಿಸುತ್ತಿಲ್ಲ. ಸಮರ್ಪಕ ಚಿಂತನೆ ಮತ್ತು ದೂರದೃಷ್ಟಿಯೊಂದಿಗೆ ಆತ್ಮನಿರ್ಭರತೆಯ ಪರಿಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದರು.

ಉತ್ಪಾದಕತೆಗೆ ಸಂಬಂಧಿಸಿದ ಪ್ರೋತ್ಸಾಹ (ಪಿಎಲ್‍ಐ) ಕಾರ್ಯಕ್ರಮದಲ್ಲಿ 14 ಕ್ಷೇತ್ರಗಳಡಿ ಅತಿ ಹೆಚ್ಚು ಹಣ ಬಳಸುತ್ತಿದ್ದು, ಅಲ್ಲೂ ಇದೇ ಮಾನದಂಡವನ್ನು ಅನುಸರಿಸಲಾಗುತ್ತಿದೆ. ಕೌಶಲ ಇರುವ ಕ್ಷೇತ್ರಗಳು, ದೇಶದೊಳಗೇ ಮಾರುಕಟ್ಟೆ ಅವಕಾಶ, ಸ್ಥಳೀಯವಾಗಿ ಉತ್ಪಾದಿಸಬಹುದಾದ ಉಪಕರಣ, ವಸ್ತುಗಳಿಗೆ ಈ 14 ಕ್ಷೇತ್ರಗಳಲ್ಲಿ ಆದ್ಯತೆ ನೀಡಿದ್ದೇವೆ. ಉತ್ಪಾದನೆಗೆ ಅವಕಾಶ, ದೇಶದೊಳಗೆ ಮತ್ತು ವಿದೇಶದಲ್ಲಿ ಮಾರುಕಟ್ಟೆ ಸಾಧ್ಯತೆ, ಉದ್ಯೋಗ ಅವಕಾಶವನ್ನು ಗಮನದಲ್ಲಿ ಇಟ್ಟುಕೊಂಡು ಈ 14 ಕ್ಷೇತ್ರಗಳನ್ನು ಆಯ್ಕೆ ಮಾಡಿದ್ದೇವೆ ಎಂದು ತಿಳಿಸಿದರು.

ಔಷಧಿ ಕ್ಷೇತ್ರದ ಕಚ್ಚಾ ವಸ್ತುಗಳನ್ನು ಹಿಂದೆ ಇಲ್ಲಿಯೇ ಉತ್ಪಾದಿಸಲಾಗುತ್ತಿತ್ತು. ನಿಧಾನವಾಗಿ ಅದನ್ನು ವಿದೇಶದಿಂದ ಆಮದು ಮಾಡಲಾಯಿತು. ವಿದೇಶದ ಬೇಡಿಕೆಯ ಶೇ. 66 ಲಸಿಕೆಗಳನ್ನು ಭಾರತದಲ್ಲೇ ಉತ್ಪಾದಿಸಿ ಕಳುಹಿಸುತ್ತಿದ್ದೇವೆ. ಔಷಧಿ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಸಾಧಿಸಲು ಉದ್ದೇಶಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ನಮಗಿರುವ ಅವಕಾಶ ಬಳಕೆ ಮತ್ತು ಸ್ವಾವಲಂಬಿ ಆಗುವುದರತ್ತ ಮುನ್ನಡೆಯುತ್ತಿದ್ದೇವೆ. ಜಾಗತಿಕ ಸರಬರಾಜುದಾರ ಆಗಲು ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ಪೋಲಿಯೋ ಲಸಿಕೆಗೆ ಆರು ತಿಂಗಳು ಕಾಯುವ ಸ್ಥಿತಿ ಹಿಂದೆ ಇತ್ತು. ಈಗ ಕೋವಿಡ್‍ಗೆ ಹಲವು ಲಸಿಕೆಗಳನ್ನು ನಾವು ಉತ್ಪಾದಿಸುತ್ತಿದ್ದೇವೆ. ವಿದೇಶಗಳ ಮಾನ್ಯತೆಯೂ ಲಭಿಸಿದೆ ಎಂದು ಹೆಮ್ಮೆಯಿಂದ ನುಡಿದರು. ನಮ್ಮ ಶಕ್ತಿಯ ಅನಾವರಣದಿಂದ ಆತ್ಮನಿರ್ಭರತೆಯ ಸಾಧನೆ ಮಾಡಬೇಕಿದೆ ಎಂದು ತಿಳಿಸಿದರು.

ಜನ್‍ಧನ್ ಖಾತೆಯ ಮೂಲಕ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಪರಿಹಾರ ವಿತರಣೆ ಕಷ್ಟವಾಗಲಿಲ್ಲ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳೂ ಈ ವಿಚಾರದಲ್ಲಿ ಸವಾಲನ್ನು ಎದುರಿಸಿದ್ದವು. ಹಸಿವಿನಿಂದ ಯಾರೂ ಇರಬಾರದೆಂಬ ಉದ್ದೇಶದಿಂದ ಉಚಿತವಾಗಿ ಪಡಿತರವನ್ನೂ ನೀಡಲಾಯಿತು. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್” ಎಲ್ಲ ರಾಜ್ಯಗಳಿಗೂ ತಲುಪಿದೆ. ಬಿಜೆಪಿ ಆಡಳಿತ, ಬಿಜೆಪಿಯೇತರ ಆಡಳಿತದ ರಾಜ್ಯ ಎಂಬ ಭೇದಭಾವ ಇರಲಿಲ್ಲ ಎಂದರು.

Also read: ಜಾಗತಿಕ ಮಟ್ಟದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕರಿನೆರಳು: ಕಚ್ಚಾತೈಲ ಬೆಲೆ ಏರಿಕೆ, ಭಾರತದಲ್ಲಿ ಮಾತ್ರ ಸದ್ಯ ಸ್ಥಿರ

ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಶುಭಾಶಯ ಕೋರಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು 2014-19ರ ನಡುವಿನ ಆಡಳಿತಾವಧಿಯಲ್ಲಿ ಮಾಡಿದ ಕಾರ್ಯಗಳಿಂದ ನಾವಿಂದು ಬದಲಾದ ಭಾರತವನ್ನು ನೋಡುತ್ತಿದ್ದೇವೆ ಎಂದು ವಿಶ್ಲೇಷಿಸಿದರು. ಪ್ರಧಾನಿಯವರು ನುಡಿದಂತೆ ನಡೆದರು. 8 ಕೋಟಿ ಸಿಲಿಂಡರ್ ಸಂಪರ್ಕ ನೀಡುವ ಭರವಸೆಯನ್ನು ಅನುಷ್ಠಾನಕ್ಕೆ ತಂದರು. ಕೆಲವು ಮಾಧ್ಯಮಗಳು ಇದರ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿದರೂ ಅವರಿಗೆ “ಇದು ಬೋಗಸ್” ಎನ್ನಲು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.

ಹಿಂದಿನ ಸರಕಾರದ ಆಡಳಿತಾವಧಿಯಲ್ಲಿ ಗರಿಷ್ಠ ಪ್ರಮಾಣದ ಭ್ರಷ್ಟಾಚಾರದಿಂದ ದೇಶವು ರೋಸಿ ಹೋಗಿತ್ತು. ಈ ಸಂದರ್ಭದಲ್ಲಿ ಸರಿಯಾದ ಫಲಾನುಭವಿಗೆ ಯೋಜನೆಯ ಲಾಭ ನೀಡಿದ್ದಲ್ಲದೆ ಭ್ರಷ್ಟಾಚಾರರಹಿತವಾಗಿ ಯೋಜನೆ ಜಾರಿ ಮಾಡಲಾಯಿತು ಎಂದು ತಿಳಿಸಿದರು.

ಭ್ರಷ್ಟಾಚಾರ ಇಲ್ಲದೆ ವಿದ್ಯುತ್ ಸಂಪರ್ಕ, ಸರಳ ರೀತಿಯಲ್ಲಿ ಭ್ರಷ್ಟತೆ ಇಲ್ಲದೆ ವ್ಯಾಪಾರ ವ್ಯವಹಾರ, ವ್ಯವಹಾರದಲ್ಲೂ ಅಭಿವೃದ್ಧಿ ಕಾಣಲು ಕಿರಿಕಿರಿ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇದು ಗುಜರಾತ್ ಮಾದರಿಯಾಗಿ ಹೊರಹೊಮ್ಮಿದೆ. ಎಂಟು ವರ್ಷಗಳಲ್ಲಿ ಭ್ರಷ್ಟಾಚಾರದ ಪಿಸುಮಾತೂ ಕೇಳಿಸಿಲ್ಲ ಎಂದು ನುಡಿದರು.

ಪ್ರತಿ ಮನೆಗೂ ನಳ್ಳಿ ನೀರಿನ ಯೋಜನೆ ಬರಿಯ ಘೋಷಣೆಯಲ್ಲ. 5 ಕೋಟಿ ಮನೆಗಳು ಇದರ ಲಾಭ ಪಡೆದಿವೆ. ಉಳಿದ ಸುಮಾರು 3.8 ಕೋಟಿ ಸಂಪರ್ಕಕ್ಕೆ 60 ಸಾವಿರ ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ ಎಂದು ತಿಳಿಸಿದರು. 2014-19 ನಡುವಿನ ಅವಧಿಯಲ್ಲಿ ನವ ಭಾರತದ ನಿರ್ಮಾಣಕ್ಕಾಗಿ ಘೋಷಿಸಿದ ಕಾರ್ಯಕ್ರಮಗಳು ಅರ್ಹತೆಯ ಅಧಾರದಲ್ಲಿ ಸಕಾಲದಲ್ಲಿ ಅನುಷ್ಠಾನಕ್ಕೆ ಬಂದಿವೆ. ಕೆಲವರಿಗಷ್ಟೇ ಯೋಜನೆ ಜಾರಿ, ಇನ್ನೂ ಹಲವರಿಗೆ ಪ್ರಯೋಜನ ಸಿಗದಿರುವ ರಾಜಕೀಯ ನಮ್ಮದಲ್ಲ. ಎಲ್ಲರಿಗೂ ಪ್ರಯೋಜನ ಕೊಡುವ ಚಿಂತನೆ ಮತ್ತು ಅನುಷ್ಠಾನ ನಮ್ಮದಾಗಿತ್ತು ಎಂದು ತಿಳಿಸಿದರು.

ಎಲ್ಲ ಮನೆಗೆ ವಿದ್ಯುತ್, ಅರ್ಹರೆಲ್ಲರಿಗೂ ಗ್ಯಾಸ್ ಸಂಪರ್ಕ, ಕಡಿಮೆ ವಿದ್ಯುತ್ ಬಳಸುವ ಬಲ್ಬ್ ವಿತರಣೆ ಸಾಧ್ಯವಾಗಿದೆ. ಅಭಿವೃದ್ಧಿ ವಿಚಾರ ಬಂದಾಗ ಎಲ್ಲರೂ ಸಮಾನರು ಎಂಬ ಮಾನದಂಡವನ್ನು ಅನುಸರಿಸಲಾಗಿದೆ. 2014-19 ನಡುವೆ ಈ ರೀತಿಯ ಪ್ರಯತ್ನ ಸಾಗಿದ್ದರಿಂದ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲೂ ಅಭಿವೃದ್ಧಿ ಕಾರ್ಯ ಮುಂದುವರಿಸಲು ಸಾಧ್ಯವಾಯಿತು. ಬಿಜೆಪಿಯಲ್ಲಿ ಮಹಿಳೆಯರಿಗೆ ಸುರಕ್ಷತೆಯ ವಾತಾವರಣವಿದೆ. ಪಕ್ಷದಲ್ಲಿ ಮಹಿಳೆಗೆ ಆದ್ಯತೆ ಕೊಡಲಾಗುತ್ತಿದೆ. ಬಿಜೆಪಿ ವಿಶಾಲವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವರಾದ ಡಾ|| ಸಿ.ಎನ್. ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ, ಆರ್ಥಿಕ ಪ್ರಕೋಷ್ಠದ ರಾಜ್ಯ ಸಂಚಾಲಕರಾದ ಸಮೀರ್ ಕಾಗಲ್ಕರ್ ಅವರು ಭಾಗವಹಿಸಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Central Minister Nirmala SeetharamanCovid vaccinationKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews KannadaState Newsಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ಕೋವಿಡ್ ಲಸಿಕೆಬೆಂಗಳೂರು
Previous Post

ಜಾಗತಿಕ ಮಟ್ಟದಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕರಿನೆರಳು: ಕಚ್ಚಾತೈಲ ಬೆಲೆ ಏರಿಕೆ, ಭಾರತದಲ್ಲಿ ಮಾತ್ರ ಸದ್ಯ ಸ್ಥಿರ

Next Post

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮೇಯರ್ ಸುನೀತಾ ಅಣ್ಣಪ್ಪರಿಗೆ ಸನ್ಮಾನ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮೇಯರ್ ಸುನೀತಾ ಅಣ್ಣಪ್ಪರಿಗೆ ಸನ್ಮಾನ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು | ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ ‘ನಾವು ನಮ್ಮವರು’!

July 30, 2025

ನಿಮಗೆ ಕಾಶಿ ಯಾತ್ರೆ, ದಕ್ಷಿಣ ಯಾತ್ರೆ ಹೋಗುವ ಆಸೆ ಇದಿಯಾ? ಐಆರ್’ಸಿಟಿಸಿ ಕೊಟ್ಟಿದೆ ಬಿಗ್ ಗುಡ್ ನ್ಯೂಸ್

July 30, 2025

ಆ.2 | ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ – ಮಾಹಿತಿ ಶಿಬಿರ

July 30, 2025

ಲಾರಿಗೆ ಬಸ್ ಡಿಕ್ಕಿ | ಇಬ್ಬರು ಸ್ಥಳದಲ್ಲೇ ಸಾವು

July 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಜೀ಼ ಕನ್ನಡದಲ್ಲಿ ಹೊಚ್ಚಹೊಸ ಶೋ ನ ದರ್ಬಾರು | ನಿಮ್ಮನ್ನು ಮನರಂಜಿಸಲು ಬರ್ತಿದೆ ಸಂಬಂಧಗಳ ನಡುವಿನ ಪ್ರೀತಿ ಸಾರುವ ‘ನಾವು ನಮ್ಮವರು’!

July 30, 2025

ನಿಮಗೆ ಕಾಶಿ ಯಾತ್ರೆ, ದಕ್ಷಿಣ ಯಾತ್ರೆ ಹೋಗುವ ಆಸೆ ಇದಿಯಾ? ಐಆರ್’ಸಿಟಿಸಿ ಕೊಟ್ಟಿದೆ ಬಿಗ್ ಗುಡ್ ನ್ಯೂಸ್

July 30, 2025

ಆ.2 | ಸರ್ಕಾರಿ ಶಾಲೆಗಳಲ್ಲಿ ಉಚಿತ ದಂತ ತಪಾಸಣೆ – ಮಾಹಿತಿ ಶಿಬಿರ

July 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!