ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಫಾರಿ ವೀಕ್ಷಣೆಗೆಂದು #Safari viewing ಆಗಮಿಸಿದ್ದ ಪ್ರವಾಸಿಗರ ಮಿನಿ ಬಸ್ ಮೇಲೆ ಚಿರತೆ #Leopard ಹಾರಿ, ಕಿಟಕಿಗೆ ನೇತಾಡಿದ್ದು ಆತಂಕ ಸೃಷ್ಠಿಸಿದ ಘಟನೆ ಬನ್ನೇರುಘಟ್ಟ #Bannerughatta ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಸಫಾರಿಯಲ್ಲಿ ಇತ್ತೀಚಿಗೆ ವಿಶಾಲವಾದ ತೆರೆದ ಆವರಣದಲ್ಲಿ ಚಿರತೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಪ್ರದೇಶದಲ್ಲಿ 19 ಚಿರತೆಗಳಿಗೆ ಆಶ್ರಯ ನೀಡಿ ಪ್ರತಿ ದಿನ 4 ಅಥವಾ 5 ಚಿರತೆಗಳನ್ನು ಒಂದೊಂದು ತಂಡವನ್ನಾಗಿಸಿ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಬಿಡಲಾಗುತ್ತದೆ.
Also read: ಫ್ರಿಜ್ಡ್’ನಲ್ಲಿಟ್ಟಿದ್ದ ಊಟ, ಕೇಕ್ ತಿಂದು 5 ವರ್ಷದ ಬಾಲಕ ಸಾವು | ಪೋಷಕರು ಅಸ್ವಸ್ಥ

ಚಿರತೆಗಳು ಬಸ್, ಜೀಪ್ ಬಳಿ ಬರುವುದು, ಕೆಲವು ಬಾರಿ ಬಸ್, ಜೀಪ್ಗಳ ಮೇಲೆ ಹತ್ತುವುದು ಸಾಮಾನ್ಯವಾಗಿದ್ದು, ಇನ್ನೊಂದು ವ್ಯಾನ್’ನಲ್ಲಿದ್ದ ಪ್ರವಾಸಿಗರು ಚಿರತೆ ಬಸ್ ಮೇಲೆ ಹಾರುವ ಫೋಟೋ ಕ್ಲಿಕ್ಕಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news





















Discussion about this post