ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri RaghavendraSwamyMutt ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ #Subudhendra Theertha Shri ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಜನವರಿ 2ರ ಗುರುವಾರ ಸಂಜೆ 5:30ಕ್ಕೆ ವಿದುಷಿ ಪದ್ಮಜಾ ಜಯರಾಮ್ ನಿರ್ದೇಶನದಲ್ಲಿ ಶ್ರೀ ನಾಟ್ಯ ಕಲಾರ್ಪಣ ನೃತ್ಯ ಕೇಂದ್ರದ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ” ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.
ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು
Also read: ಜ.2-5 | ‘ಸೇವಾ ಸದನ’ದಲ್ಲಿ ಸಾಂಸ್ಕೃತಿಕ ರಸದೌತಣ | ನಿರಂತರಂ-ರಾಷ್ಟ್ರೀಯ ಸಂಗೀತ, ನೃತ್ಯ ಮಹೋತ್ಸವ
ಜ.3ರಂದು ಸಂವಾದ ಕಾರ್ಯಕ್ರಮ
ಶ್ರೀ ಪೂರ್ಣಪ್ರಜ್ಞ ಪ್ರತಿಷ್ಠಾನದ ವತಿಯಿಂದ ಜನವರಿ 3ರ ಶುಕ್ರವಾರ ಸಂಜೆ 6:30ಕ್ಕೆ ‘ರಾಷ್ಟ್ರಪ್ರಶಸ್ತಿ’ ಪುರಸ್ಕೃತ’ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಮತ್ತು ಡಾ. ಜಯಂತ್ ವ್ಯಾಸನಕೆರೆ ಇವರಿಂದ “ಪ್ರಸ್ತುತ ಸನ್ನಿವೇಶದಲ್ಲಿ ಮಾಧ್ವ ವಿದ್ವಾಂಸರ ಹೊಣೆಗಾರಿಕೆ” ಮತ್ತು “ಮಕ್ಕಳ ಸಂಸ್ಕಾರದಲ್ಲಿ ಮಾಧ್ವ ಮಹಿಳೆಯ ಪಾತ್ರ” ವಿಷಯವಾಗಿ ಸಂವಾದ ಕಾರ್ಯಕ್ರಮ.
ನಿರ್ವಹಣೆ : ಪಂ. ಶ್ಯಾಮಾಚಾರ್ಯ ಬಂಡಿ. ಸ್ಥಳ : ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯರಸ್ತೆ, ಬೆಂಗಳೂರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post