ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪವಮಾನಪುರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಎಪ್ರಿಲ್ 3ರ ಸಂಜೆ 7 ಗಂಟೆಯಿಂದ ಹರಿದಾಸ ಮಂಜರಿ #Haridasa Manjari ಕಾರ್ಯಕ್ರಮ ನಡೆಯಲಿದೆ.
ಶ್ರೀಮಠದ ವಿಚಾರಣಾಕರ್ತರಾದ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಕು. ರಶ್ಮಿ ಮತ್ತು ಕು. ರಕ್ಷಾ ಸಹೋದರಿಯರಿಂದ ಹರಿದಾಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕೀ-ಬೋರ್ಡ್ ವಾದನದಲ್ಲಿ ಶ್ರೀ ಅಮಿತ್ ಶರ್ಮಾ ಮತ್ತು ತಬಲಾ ವಾದನದಲ್ಲಿ ಶ್ರೀ ಸರ್ವೋತ್ತಮ ಸಾಥ್ ನೀಡಲಿದ್ದಾರೆ ಎಂದು ಶ್ರೀ ಗೊಗ್ಗಿ ಕೃಷ್ಣಾಚಾರ್ ತಿಳಿಸಿದ್ದಾರೆ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, 6ನೇ ಹಂತ ಬನಶಂಕರಿ, ಬೆಂಗಳೂರು
Also read: ರೈಲ್ವೆ ಗೇಟ್ ಬಳಿ ಹಸುಗಳ ಸಾವು | ಅಗತ್ಯ ಎಚ್ಚರಿಕಾ ಕ್ರಮ ಕೈಗೊಳ್ಳಿ
ಭರತನಾಟ್ಯ ಪ್ರದರ್ಶನ
ಜಯನಗರ 5ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾರ್ಚ್ 27ರಂದು ಸಂಜೆ 5.30ರಿಂದ ಭರತನಾಟ್ಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ವಿದುಷಿ ಶ್ರೀಮತಿ ಸುಮಾ ಐತಾಳ್ ಅವರ ನಿರ್ದೇಶನದಲ್ಲಿ ಕಲಾಸಂಕಲ್ಪ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಶ್ರೀ ನಂದಕಿಶೋರಾರ್ಚಾ ತಿಳಿಸಿದ್ದಾರೆ.
ಸ್ಥಳ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-41
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post