ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶೇಷಾದ್ರಿಪುರದ ಪ್ಲಾಟ್ ಫಾರ್ಮ್ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಏ.15ರಂದು ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ ಜರುಗಿತು.
ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಹಾಗೂ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಶ್ರೀ ಸುಶೀಲೇಂದ್ರಾಚಾರ್ ಗೊಗ್ಗಿಯವರಿಂದ “ಶ್ರೀ ಸುಶಮೀಂದ್ರತೀರ್ಥರ ಜೀವನ ಮತ್ತು ಸಾಧನೆ” ವಿಷಯವಾಗಿ ಪ್ರವಚನ, ಶೇಷಾದ್ರಿಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಮತ್ತು ಸುಧೀಂದ್ರನಗರದ ಶ್ರೀ ವಿಜಯವಿಠ್ಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ರಥೋತ್ಸವ, ಮಹಾಮಂಗಳಾರತಿ, ಅಲಂಕಾರ ಪಂಕ್ತಿ ಸೇವಾ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಎಂದು ಶ್ರೀಮಠದ ವಿಚಾರಣಾಕರ್ತರಾದ ಸುಬ್ಬು ನರಸಿಂಹ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post