ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಿಯುಗ ಕಾಮಧೇನು, ಕಲ್ಪವೃಕ್ಷ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353ನೇ ಮಧ್ಯಾರಾಧನೆ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಯರ ಮಠದಲ್ಲಿ ವೈಭವದಿಂದ ನಡೆದಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳು #Shri Raghavendra Swamy ಸಶರೀರರಾಗಿ ಬೃಂದಾವನ ಪ್ರವೇಶಿಸಿದ ಪವಿತ್ರ ದಿನ ಇಂದು. ಹೀಗಾಗಿ, ಈ ಮಧ್ಯಾರಾಧನೆಯ ಅಂಗವಾಗಿ ರಾಯರ ಬೃಂದಾವನಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರದೊಂದಿಗೆ ಮಹಾ ಅಭಿಷೇಕವು ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಿತು.
ರಾಯರ ಬೃಂದಾವನಕ್ಕೆ ವಿಶೇಷ ರತ್ನ ಕವಚದ ಅಲಂಕಾರ, ಬೆಳಗ್ಗೆ 7ರಿಂದ ರಿಂದ 11 ಗಂಟೆಯವರೆಗೆ ಸ್ವರ್ಣ ಸಿಂಹಾಸನದಲ್ಲಿ ರಾಯರ ಪ್ರತೀಕವನ್ನು ಇರಿಸಿ ರಾಯರ ಪಾದಪೂಜೆ, ಫಲ ಪುಷ್ಪ ಸಮರ್ಪಣೆ, 11ಕ್ಕೆ ಸುವರ್ಣ ಕನಕಾಭಿಷೇಕ, ಮಹಾಮಂಗಳಾರತಿ ನಡೆಯಲಿದ್ದು ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಲಿದೆ.
Also read: ಐಸಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರಾ ಜಯ್ ಶಾ?
ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತ ಜನರು ರಾಯರ ದರ್ಶನ, ತೀರ್ಥ, ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಿ ಶ್ರೀಮಠದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಂಡು ಭಕ್ತರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಈ ದಿನ ಸಂಜೆ 5 ರಿಂದ ರಾಯರ ಬಗ್ಗೆ ಪ್ರವಚನ, 6ಕ್ಕೆ ರಥೋತ್ಸವ ಜರಗಲಿದ್ದು ನಂತರ 7 ಗಂಟೆಗೆ ಬೆಂಗಳೂರು ಸಹೋದರರಾದ ವಿದ್ವಾನ್ ಎಂ.ಬಿ. ಹರಿಹರನ್, ವಿದ್ವಾನ್ ಎಸ್. ಅಶೋಕ್ ಮತ್ತು ವೃಂದದವರಿAದ ದಾಸ ತರಂಗಿಣಿ ಕಾರ್ಯಕ್ರಮ ನಡೆಯಲಿದೆ ಎಂದು ಈ ಮಠದ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರು ತಿಳಿಸಿದರು.
ವಿಶೇಷವಾಗಿ ಗುರುವಾರ 22ನೇ ತಾರೀಕು ಬೆಳಗ್ಗೆ 8:30ಕ್ಕೆ ಜಯನಗರದ ರಾಜಬೀದಿಗಳಲ್ಲಿ ಮಹಾರಥೋತ್ಸವದ ಮೆರವಣಿಗೆಯು ಹೊರಡಲಿದೆ ಭಕ್ತಾದಿಗಳು ಭಕ್ತಿಯಿಂದ ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post