ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendra Swamy Mutt ಡಿ.17ರ ನಾಳೆಯಿಂದ ಧರ್ನುಮಾಸದ #Dhanurmasa ಅಂಗವಾಗಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ #Subhudendra Theertha Shri ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ಡಿ.17ರ ನಾಳೆಯಿಂದ 2025ರ ಜನವರಿ 13ರವರೆಗೂ ಧರ್ನುಮಾಸ ಪೂಜೆಗಳು ನಡೆಯಲಿವೆ.

Also read: ಬದುಕಿದ್ದಾಗಲೇ ಸಾಧನೆ, ಕಂಡ ಕನಸುಗಳನ್ನು ಈಡೇರಿಸಿಕೊಳ್ಳಿ: ಅರುಣಾದೇವಿ ಕರೆ
ಈ ಸೇವೆಗಳಲ್ಲಿ ಭಾಗವಹಿಸುವಂತ ಭಕ್ತರು ಶ್ರೀ ಮಠದ ಈ ವಾಟ್ಸಪ್ 944 9133929 ನಂಬರ್ ಆನ್ಲೆÊನ್ ಮುಖಾಂತರ ಸೇವೆ ಸಲ್ಲಿಸಿ ಶ್ರೀ ಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬಹುದು. ಹೆಚ್ಚಿನ ಮಾಹಿತಿಗಾಗಿ -08022443962- 9945429129-8660349906 ಸಂಖ್ಯೆಗೆ ಸಂಪರ್ಕಿಸಬಹುದು.

ಇನ್ನು ಶ್ರೀಮಠದಲ್ಲಿ ಪೌರ್ಣಮಿ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆಯನ್ನು #Shri Sathyanarayana Pooje ಪುರೋಹಿತರಾದ ಶ್ರೀ ನಂದಕಿಶೋರಾಚಾರ್ಯರು ಮತ್ತು ಶ್ರೀ ರಾಘವೇಂದ್ರ ಆಚಾರ್ಯರು ನೆರವೇರಿಸಿದರು.
ಈ ಸಂದರ್ಭದಲ್ಲಿ ನೂರಾರು ಭಕ್ತರು ಮತ್ತು ಸೇವಾ ಕರ್ತೃಗಳು ಈ ಸತ್ಯನಾರಾಯಣ ವ್ರತದ ಪೂಜೆಯ ಸಂಕಲ್ಪವನ್ನು ಮಾಡಿ ವ್ರತದ ಪೂಜೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅಲಂಕಾರ ಮತ್ತು ವಿಶೇಷ ಉತ್ಸವಗಳು ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news







Discussion about this post