ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬ್ರಿಟನ್ ದೇಶದ ಮಾಜಿ ಪ್ರಧಾನಿ ಋಷಿ ಸುನಕ್ #Rishi Sunak ದಂಪತಿ, ತಮ್ಮ ಕುಟುಂಬಸ್ಥರೊಂದಿಗೆ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ #Raghavendra Swamy Mutt ಭೇಟಿ ನೀಡಿ ಗುರುರಾಯದ ದರ್ಶನ ಪಡೆದರು.
ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸುಧಾ ನಾರಾಯಣ ಮೂರ್ತಿ ದಂಪತಿಗಳು ಕುಟುಂಬ ಸಮೇತ ಹಾಗೂ ಅವರ ಅಳಿಯ ಬ್ರಿಟನ್ ದೇಶದ ಮಾಜಿ ಪ್ರಧಾನಮಂತ್ರಿ ಋಷಿ ಸುನಕ್ ದಂಪತಿ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗೆ ಆಗಮಿಸಿ ಗುರು ರಾಯರ ದರ್ಶನ ಪಡೆದರು.
Also read: ಅಬಕಾರಿ ಇಲಾಖೆಯಲ್ಲಿ 900 ಕೋಟಿ ರೂ. ಭ್ರಷ್ಟಾಚಾರ | ಸಿಬಿಐ ತನಿಖೆಗೆ ಆಗ್ರಹ

ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದಿಂದ್ರಾಚಾರ್ಯರು ರಾಯರ ಶೇಷ ವಸ್ತç ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.
ಶ್ರೀಮಠದ ಅರ್ಚಕ ವರ್ಗದವರು ವೇದ ಘೋಷ ಮಂತ್ರ ಪೂರ್ಣ ಕುಂಭ ಸ್ವಾಗತದೊಂದಿಗೆ ಸನ್ನಿಧಿಗೆ ಬರಮಾಡಿಕೊಂಡರು.
ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಮತ್ತು ಇಸ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಕೂಡ ಜೊತೆಯಲ್ಲಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಕುಟುಂಬವು ಒಟ್ಟಿಗೆ ಆರತಿ ತೆಗೆದುಕೊಳ್ಳುತ್ತಿರುವುದು ಕಾಣಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post