ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜ್ಯುಬಿಲಿ ಆಚರಣೆ ವಿದೇಶಿ ಪದ್ಧತಿಗಳಾಗಿದ್ದು, ಇದು ಬ್ರಿಟೀಷರಿಂದ ಬಂದ ಬಳುವಳಿಗಳಾಗಿವೆ. ಹಾಗೂ ಸಿಲ್ವರ್ ಜ್ಯುಬಿಲಿ, ಗೊಲ್ಡನ್ ಜ್ಯುಬಿಲಿ ಆಚರಣೆಗಳಿಗೆ 200 ವರ್ಷಕ್ಕಿಂತ ಹೆಚ್ಚಿನ ಇತಿಹಾಸವಿಲ್ಲ ಎಂದು ಶ್ರೀ ಕೂಡಲಿ ಶೃಂಗೇರಿ 72ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಅಭಿನವ ಶಂಕರ ಭಾರತಿ ಮಹಾ ಸ್ವಾಮಿಗಳು ಹೇಳಿದರು.
ಇಲ್ಲಿನ ಎನ್ ಆರ್ ಕಾಲೋನಿಯ ಶ್ರೀ ಭ್ರಮರಾಂಭಾ ಸಮೇತ ಮಲ್ಲಿಕಾರ್ಜುನ ದೇವಾಲಯದಲ್ಲಿ ಮೈಕೋ ವಿಪ್ರಸಭಾ #MICO VipraSabha ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮೈಕೋ ವಿಪ್ರಸಭಾ ಅರ್ಧ ಮಂಡಲೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಮಲ್ಲಿಕಾರ್ಜುನ ದೇವಾಲಯದಲ್ಲಿ ಪುಣ್ಯಾಹ, ಗಣಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಸುದರ್ಶನ ಹೋಮ ಹಾಗೂ ಗಾಯತ್ರಿ ಹೋಮಗಳನ್ನು ನೆರವೇರಿಸಲಾಯಿತು. ಹೋಮಗಳನ್ನು ಪ್ರಶಾಂತ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು #Scholarship ನೀಡಲಾಯಿತು.
Also read: ಶಿವಮೊಗ್ಗ | ಇಬ್ಬರು ನಕ್ಸಲರು ಪೊಲೀಸರ ವಶಕ್ಕೆ | ಯಾರು ಆ ಇಬ್ಬರು?
ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಮತ್ತು ಪದಾಧಿಕಾರಿಗಳಾದ ವಿಶ್ವನಾಥ್, ವಿಜಯ ಕುಮಾರ್, ಶೇಷಾದ್ರಿ, ಶಶಿಭೂಷಣ್, ಪವನ್ ಅವರು ನಿರೂಪಣೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು. ಹೋಮವನ್ನು ಬಾಷ್ ಪ್ಲಾಂಟ್ ಟೆಕ್ನಿಕಲ್ ಆದ ಸುದರ್ಶನ್ ಮತ್ತು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಬಾಲ ಸುಬ್ರಹ್ಮಣ್ಯಂ ನೆರವೇರಿಸಿದರು.
ಶ್ರೀ ಕೂಡಲಿ ಶೃಂಗೇರಿ 72ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಅಭಿನವ ಶಂಕರ ಭಾರತಿ ಮಹಾ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಪಾಲ್ಗೊಂಡು ಆಶೀರ್ವಚನ ಮತ್ತು ಫಲ ಮಂತ್ರಾಕ್ಷತೆ ನೀಡಿ ಸಕಲ ಭಕ್ತರನ್ನು ಆಶೀರ್ವದಿಸಿದರು. ಮೈಕೋ ಕಾರ್ಖಾನೆಯ ಕಾರ್ಮಿಕರು ಮತ್ತು ಆಡಳಿತ ವರ್ಗದ ಹಿರಿಯ ಅಧಿಕಾರಿಗಳು ಆಗಮಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post