ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಶ್ರೀಪಾದರಾಜ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ಸುಜಯೀಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹದೊಂದಿಗೆ ದಾಸವಾಣಿ ಕರ್ನಾಟಕ ಸಂಸ್ಥೆ ವತಿಯಿಂದ ಮೇ 10 ರಂದು ರಾಘವೇಂದ್ರ ಕಾಲೋನಿಯ ಶ್ರೀ ಶ್ರೀಪಾದರಾಜರ ಮಠದಲ್ಲಿ ಶ್ರೀ ಶ್ಯಾಮಸುಂದರದಾಸರ ಆರಾಧನೆ ಮತ್ತು ನರಸಿಂಹ ಜಯಂತಿಯನ್ನು ಆಚರಿಸಲಾಯಿತು.
ದಾಸವಾಣಿ ಕರ್ನಾಟಕದ ಸಂಸ್ಥಾಪಕರಾದ ಶ್ರೀ ಜಯರಾಜ ಕುಲಕರ್ಣಿ ಮತ್ತು ಶ್ರೀ ಶ್ಯಾಮಸುಂದರದಾಸರ ಮರಿಮಗಳಾದ ಶ್ರೀಮತಿ ಮಾನಸ ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾಸವಾಣಿ ಕರ್ನಾಟಕ ಮತ್ತು ಸ್ವರಾತ್ಮಿಕ ಸಂಗೀತ ವೃಂದದವರಿಂದ ಶ್ರೀ ಶ್ಯಾಮಸುಂದರದಾಸರ ಅನೇಕ ಕೃತಿಗಳ ಗಾಯನ ಸೇವೆ ನಡೆಯಿತು.

ಶ್ರೀ ಶ್ಯಾಮಸುಂದರದಾಸರು ವರಕವಿ ದ. ರಾ. ಬೇಂದ್ರೆ ಅವರಿಗೆ ಮಾನವಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಬರಲು ಅವರಿಗೆ ಬರೆದ ವಿಶೇಷ ಪತ್ರವನ್ನು ಸಂಸ್ಕೃತಿ ಚಿಂತಕರಾದ ಡಾ. ಗುರುರಾಜ್ ಪೊಶೆಟ್ಟಿಹಳ್ಳಿ ಅವರು ಓದಿದರು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post