ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ #Shri Raghavendra Swamy 353rd Aradhane ಸಪ್ತರಾತ್ರೋತ್ಸವನ್ನು ಆಯೋಜಿಸಲಾಗಿದೆ.
ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಆಗಸ್ಟ್ 18 ರಿಂದ 24ರ ವರೆಗೆ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 353ನೇ ಆರಾಧನಾ ಸಪ್ತರಾತ್ರೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ.
ಆರಾಧನೆಯ ಎಲ್ಲಾ ದಿನಗಳಲ್ಲೂ ಪ್ರತಿದಿನ ಬೆಳಗ್ಗೆ ಗುರುಗಳ ಬೃಂದಾವನಕ್ಕೆ ಅಷ್ಟೋತ್ತರ ಪಾರಾಯಣ ಸಹಿತ ಪಂಚಾಮೃತ ಅಭಿಷೇಕ, ರಾಯರ ಪಾದಪೂಜೆ, ಕನಕಾಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿತರಣೆಯಿರುತ್ತದೆ.
Also read: ಕೋಲ್ಕತ್ತಾ ವೈದ್ಯೆ ಹತ್ಯೆ | ಆಡಳಿತದ ಅಸಮರ್ಥತೆ ಕಾರಣ | ಐಎಂಎ ತಾಲೂಕು ಅಧ್ಯಕ್ಷ ಡಾ. ಭಟ್
ಹೀಗಿವೆ ಕಾರ್ಯಕ್ರಮಗಳ ವಿವರ:
ಆಗಸ್ಟ್ 18 ರ ಭಾನುವಾರ: ಸಂಜೆ 6-30ಕ್ಕೆ ಕಾಣಿಯೂರು ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರಿAದ ಸಪ್ತರಾತ್ರೋತ್ಸವದ ಉದ್ಘಾಟನೆ, ಗೋಪೂಜೆ, ಧನ-ಧಾನ್ಯ ಪೂಜೆ.
ಆಗಸ್ಟ್ 19 ರ ಸೋಮವಾರ: ಬೆಳಗ್ಗೆ ಋಗ್ವೇದ, ಯಜುರ್ವೇದ ಮತ್ತು ನಿತ್ಯ ನೂತನ ಉಪಾಕರ್ಮ ನಂತರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ. ಸಂಜೆ 7-00ಕ್ಕೆ ವಿದುಷಿ ಶ್ರೀಮತಿ ಮೇಘಾ ಶಿವಕುಮಾರ್ ಮತ್ತು ವೃಂದದವರಿAದ ದಾಸವಾಣಿ.
ಆಗಸ್ಟ್ 20 ರ ಮಂಗಳವಾರ: ಸಂಜೆ 7-00ಕ್ಕೆ ವಿದ್ವಾನ್ ಪ್ರಾದೇಶಾಚಾರ್ ಮತ್ತು ಸಂಗಡಿಗರಿAದ ದಾಸಲಹರಿ.
ಆಗಸ್ಟ್ 21 ರ ಬುಧವಾರ: ಸಂಜೆ 7-00ಕ್ಕೆ ಬೆಂಗಳೂರು ಸಹೋದರರಾದ ವಿದ್ವಾನ್ ಹರಿಹರನ್ ಎಂ.ಬಿ., ವಿದ್ವಾನ್ ಎಸ್. ಅಶೋಕ್ ಮತ್ತು ಸಂಗಡಿಗರು ದಾಸತರಂಗಿಣಿ.
ಆಗಸ್ಟ್ 22 ರ ಗುರುವಾರ: ಬೆಳಗ್ಗೆ 8-00ಕ್ಕೆ ಜಯನಗರದ ರಾಜಬೀದಿಯಲ್ಲಿ ಶ್ರೀ ಗುರುರಾಜರ ಮಹಾ ರಥೋತ್ಸವ, ಸಂಜೆ 6-30ಕ್ಕೆ ವಿದ್ವಾನ್ ಜಯತೀರ್ಥ ಮೇವುಂಡಿ ಮತ್ತು ಸಂಗಡಿಗರಿAದ ದಾಸ ಝೇಂಕಾರ.
ಆಗಸ್ಟ್ 23ರ ಶುಕ್ರವಾರ: ಸಂಜೆ 7-00ಕ್ಕೆ ವಿದ್ವಾನ್ ಜನಾರ್ಧನ್ ಮತ್ತು ಸಂಗಡಿಗರಿAದ ಸ್ಯಾಕ್ಸೋಫೋನ್ ವಾದನ.
ಆಗಸ್ಟ್ 24 ರ ಶನಿವಾರ: ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ.
ಆರಾಧನೆಯ ಎಲ್ಲಾ ದಿನಗಳಲ್ಲೂ ಪ್ರತಿದಿನ ಸಂಜೆ 5-30ಕ್ಕೆ ವಿದ್ವಾನ್ ಜಗನ್ನಾಥಾಚಾರ್ಯ ರಾಯಚೂರು ಇವರಿಂದ ಶ್ರೀ ಗುರುಗುಣಸ್ತವನ ವಿಷಯವಾಗಿ ಧಾರ್ಮಿಕ ಪ್ರವಚನ ಜರುಗುತ್ತದೆ.
ಈ ಆರಾಧನಾ ಮಹೋತ್ಸವದಲ್ಲಿ ಅಂದಾಜು 50,000ಕ್ಕೂ ಮಿಗಿಲಾಗಿ ಭಕ್ತ ಜನರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ನೆರವೇರಲಿದೆ. ಈ ಸುಸಂದರ್ಭದಲ್ಲಿ ಶ್ರೀ ಗುರುರಾಯರಿಗೆ ಸೇವೆಯನ್ನು ಮಾಡಿಸುವಂತಹ ಭಕ್ತರು ವಾಟ್ಸಪ್ ಈ ನಂಬರ್ 9449133929 ಆನ್ಲೆÊನ್ ಮುಖಾಂತರ ಸೇವೆ ಸಲ್ಲಿಸಿ ಗುರುರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು.
ಸೇವೆಯನ್ನು ಸಲ್ಲಿಸಿದ ಭಕ್ತರಿಗೆ ಶೇಷವಸ್ತ್ರ, ಫಲ ಮಂತ್ರಾಕ್ಷತೆ, ಪರಿಮಳ ಮಹಾಪ್ರಸಾದ, ಕೊಡಲಾಗುವುದು ಎಂದು ನಂದಕಿಶೋರ್ ಆಚಾರ್ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 08022443962- 9945429129- 9449133929- 8660349906 ಸಂಖ್ಯೆಗಳಿಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post