ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಧ್ವನವಮಿ #Madhva Navami ಅಂಗವಾಗಿ ತ್ಯಾಗರಾಜನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendraswamy Mutt ಜ.27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಜ.27ರ ನಾಳೆಬೆಳಗ್ಗೆ 8 ಗಂಟೆಯಿಂದ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಧ್ವಾಚಾರ್ಯರಿಗೆ ಹಾಗೂ ಗುರುರಾಯರಿಗೆ ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಸಾಮೂಹಿಕ ಶ್ರೀ ವಾಯು ಸ್ತುತಿ ಮತ್ತು ಸಾಮೂಹಿಕ ಶ್ರೀ ಸುಮಧ್ವ ವಿಜಯ ಪಾರಾಯಣ, ನೂತನ ಪ್ರಾಣದೇವರ ಉತ್ಸವ ಮೂರ್ತಿ ಪ್ರಾಣಪ್ರತಿಷ್ಠಾಪನೆ ಮತ್ತು ರಜತ ಕವಚ ಸಮರ್ಪಣೆ, ವಿವಿಧ ಭಜನಾ ಮಂಡಳಿಗಳ ಗಾಯನದೊಂದಿಗೆ ಶ್ರೀ ಮಧ್ವಾಚಾರ್ಯರ ಹಾಗೂ ಶ್ರೀ ಪ್ರಾಣದೇವರ ರಾಜಬೀದಿ ಉತ್ಸವ, ಮಧ್ವಶಾಸ್ತ್ರ ಸಂಪನ್ನರಾದ ಶ್ರೀ ಕರ್ನೂಲು ಶ್ರೀನಿವಾಸಾಚಾರ್ ಮತ್ತು ಶ್ರೀ ಕಲ್ಲಾಪುರ ಪವಮಾನಾರ್ಚಾ ಇವರಿಂದ ಈಗಿನ ಪೀಳಿಗೆಗೆ ಮಧ್ವಾಚಾರ್ಯರ ಸಿದ್ಧಾಂತ ಕುರಿತು ವಿಶೇಷ ಉಪನ್ಯಾಸ ಹಾಗೂ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿವೆ.
ಹೆಚ್ಚಿನ ಮಾಹಿತಿಗೆ 9900215389 / 080-41201274ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















