ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ #Shri Raghavendraswamy ಪೂರ್ವಾರಾಧನೆ ಇಂದು ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಯರ ಮಠದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದು, ಶ್ರೀಮಠ ಅಕ್ಷರಶಃ ಸ್ವರ್ಗದಂತ ಭಾಸವಾಗುತ್ತಿದೆ.
ಬೆಳಗಿನ ಜಾವ ಸುಪ್ರಭಾತ ನಾದಸ್ವರ ವಾದ್ಯದೊಂದಿಗೆ ಪ್ರಾರಂಭವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಅರ್ಚಕರಿಂದ ವಿಶೇಷವಾಗಿ ಹಾಲು (ಮೊಸರು) ಮಜ್ಜಿಗೆ, ತುಪ್ಪ, ಜೇನುತುಪ್ಪ, ಸಕ್ಕರೆ, ಎಳೆನೀರು ಇತ್ಯಾದಿ ನಾನಾ ಬಗೆಯ ಫಲಗಳಿಂದ ಫಲ ಪಂಚಾಮೃತ ಅಭಿಷೇಕವನ್ನು ರಾಯರ ಅಷ್ಟೋತ್ತರ ಪಾರಾಯಣದೊಂದಿಗೆ ನೆರವೇರಿಸಿ ಆ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.
ಶ್ರೀ ಮಠದ ವತಿಯಿಂದ ಆರ್.ಕೆ. ವಾದಿಂದ್ರಾಚಾರ್ಯರು, ಜಿ.ಕೆ. ಆಚಾರ್ಯರು ಮತ್ತು ಶ್ರೀ ನಂದಕಿಶೋರಾಚಾರ್ಯರು ಲೋಕ-ಕಲ್ಯಾಣಕ್ಕಾಗಿ ಗುರು ರಾಯರಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಸ್ವರ್ಣ ಸಿಂಹಾಸನದಲ್ಲಿ ಶ್ರೀ ರಾಯರಿಗೆ ಪಾದಪೂಜೆ ನೆರವೇರಿಸಿದರು.
Also read: ಬಾಂಗ್ಲಾದಂತೆ ಭಾರತದಲ್ಲೂ ಅರಾಜಕತೆ ಸೃಷ್ಠಿಸಲು ಕಾಂಗ್ರೆಸ್ ಸಂಚು | ಕೇಂದ್ರ ಸಚಿವ ಜೋಶಿ ಕಿಡಿ
ಭಕ್ತರು ಕೂಡ ಸಾಮೂಹಿಕವಾಗಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಪಾದಪೂಜೆ ಫಲ ಸಮರ್ಪಣೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಸುಗಂಧ ದ್ರವ್ಯ ನಾನಾ ವಿಧವಾದ ಪುಷ್ಪಗಳಿಂದ ಅಲಂಕರಿಸಲಾಯಿತು. ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆಯು ನೆರವೇರಿತು.
ಗುರು ರಾಯರ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಅಚ್ಚುಕಟ್ಟಾದ ಕ್ಯೂ ವ್ಯವಸ್ಥೆ, ಪ್ರಸಾದಕ್ಕೂ ಕ್ಯೂ ವ್ಯವಸ್ಥೆ, ಹಿರಿಯ ನಾಗರಿಕ ವಯೋವೃದ್ಧರಿಗೂ ಪ್ರತ್ಯೇಕ ಕ್ಯೂ ವ್ಯವಸ್ಥೆಯನ್ನು ಮಾಡಲಾಗಿದೆ.
ಇನ್ನು ಇಂದು ಸಂಜೆ ಪ್ರವಚನ ವಿಶೇಷವಾಗಿ `ರಜತ-ಸ್ವರ್ಣ-ಲೇಪಿತ ಗಜವಾಹನ ಉತ್ಸವದೊಂದಿಗೆ ಸಂಜೆ 7ಕ್ಕೆ ದಾಸ-ಲಹರಿ ವಿದ್ವಾನ್- ಶ್ರೀ ಪ್ರಾದೇಶಾಚಾರ್ಯ ವೃಂದ ದಿಂದಗಾಯನ ಕಾರ್ಯಕ್ರಮವು ಜರುಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳು ರಾಯರ ಅನುಗ್ರಹ ಮತ್ತು ಭಕ್ತರ, ಸ್ವಯಂ ಸೇವಕರ ಸಿಬ್ಬಂದಿಗಳ, ಸಹಕಾರ ಹಾಗೂ ಮಂತ್ರಾಲಯ ಶ್ರೀಗಳ ಆಶೀರ್ವಾದದಿಂದ, ಆರ್.ಕೆ. ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ನೆರವೇರುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post