ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟಕ್ಕೆ Blast in Rameshwaram Cafe ಭಾರೀ ತಿರುವು ದೊರೆತಿದ್ದು, ಅಲ್ಲಿ ಸ್ಪೋಟಗೊಂಡಿದ್ದು ಐಇಡಿ ಎಂದು ಹೇಳಲಾಗಿದೆ.
ಕೆಫೆ ಆವರಣದಲ್ಲಿ ಇಂದು ಮಧ್ಯಾಹ್ನ ಸ್ಪೋಟಗೊಂಡಿದ್ದು, ಇದು ಐಇಡಿ ಸ್ಪೋಟ ಎಂದು ಅನುಮಾನಿಸಲಾಗಿದೆ. ಟಿಫನ್ ಬಾಕ್ಸ್’ನಲ್ಲಿ ಇರಿಸಿ ಸ್ಪೋಟ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಇದು ಐಇಡಿ ಸ್ಪೋಟಕವೇ ಎನ್ನಲಾಗಿದೆ.
ವಿಧ್ವಂಸಕ ಕೃತ್ಯದ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್’ಐಎ) NIA ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
Also read: ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಮತ್ತೆ ಕುಟುಕಿದ ಸಿಎಂ ಸಿದ್ದರಾಮಯ್ಯ
ಸ್ಪೋಟ ಸಂಭವಿಸಿದ ಸ್ಥಳದಲ್ಲಿ ನಟ್ಟು ಹಾಗೂ ಮೆಟಲ್ ವಸ್ತುಗಳು ದೊರೆತಿದೆ ಎಂದು ವರದಿಯಾಗಿದ್ದು, ಇದು ವಿದ್ವಂಸಕ ಕೃತ್ಯ ಎಂದೇ ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಗೃಹ ಸಚಿವ ಪರಮೇಶ್ವರ್, ಡಿಜಿ ಐಜಿಪಿ ಅಲೋಕ್ ಮೋಹನ್, ಸ್ಥಳೀಯ ಶಾಸಕರು, ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು, ಎನ್’ಐಎ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ 10 ಮಂದಿಗೆ ಗಂಭೀರ ಗಾಯಗಳಾಗಿದ್ದು, ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post