ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನಾ ಪ್ರಯುಕ್ತ ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendra Swamy Mutt ಬೆಳಗ್ಗೆ 4:30ರಿಂದ ಸಹಸ್ರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ರಾಯರ ದರ್ಶನ ಪಡೆದರು.
ಬೆಳಗ್ಗೆ 11 ಗಂಟೆಯಿಂದ ರಾತ್ರಿ 10.45ರವರೆಗೆ ಪ್ರತಿಯೊಬ್ಬ ಭಕ್ತರಿಗೂ ಅನ್ನ ಸಂತರ್ಪಣೆಯ ಪ್ರಸಾದ ಕಾರ್ಯಕ್ರಮ ವಿಶೇಷವಾಗಿ ನೆರವೇರಿತು. ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:45ರವರೆಗೂ ಶ್ರೀಮಠದಿಂದ ಬಿಎಸ್ಏನ್ಎಲ್ ಆಫೀಸ್ ಪೋಸ್ಟ್ ಆಫೀಸ್ ಮುಖಾಂತರ ಅದ್ದೂರಿಯಾಗಿ ಒಂದು ಪ್ರದಕ್ಷಿಣ ಆಕೃತಿಯಾಗಿ ಜಯನಗರದ ರಾಜಬೀದಿಯಲ್ಲಿ ಮಹಾರಥೋತ್ಸವ ನೆರವೇರಿತು.
Also read: ಶಿವಮೊಗ್ಗ | ತುಂಗಾ ತಟದಲ್ಲಿ ಕರಾವಳಿಯ ಕಂಬಳ | ಎಲ್ಲಿ, ಯಾವಾಗ ನಡೆಯಲಿದೆ? ಇಲ್ಲಿದೆ ವಿವರ

ಅಪಾರವಾದ ಸಂಖ್ಯೆಯಲ್ಲಿ ಭಕ್ತ ಜನಸಾಗರವೇ ಈ ಉತ್ಸವದಲ್ಲಿ ಭಾಗಿಯಾಗಿ ಗುರು ರಾಯರ ದರ್ಶನ ಪಡೆದು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು. ಆರ್. ಕೆ. ವಾದೀಂದ್ರ ಆಚಾರ್ಯ, ಜಿ, ಕೆ ಆಚಾರ್ಯ ನಂದಕಿಶೋರ್ ಆಚಾರ್ಯರ ನೇತೃತ್ವದಲ್ಲಿ ಅಚ್ಚುಕಟ್ಟಾಗ ವ್ಯವಸ್ಥೆಯೊಂದಿಗೆ ನೆರವೇರಿತು. ಶ್ರೀಮಠಕ್ಕೆ ಆಗಮಿಸಿದ ಪ್ರತಿಯೊಬ್ಬ ಭಕ್ತರಿಗೂ ಅನ್ನ ಸಂತರ್ಪಣೆ ಕಾರ್ಯಕ್ರಮವು ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post