ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಲಿಯುಗ ಕಾಮಧೇನು, ಭವರೋಗ ವೈದ್ಯರೆಂದೇ ಭಕ್ತರ ಮನದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ #Shri Gururaghavendraswamy 252ನೇ ಆರಾಧನಾ ಮಹೋತ್ಸವದ ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ರಾಯರ ಮಠದಲ್ಲಿ ಅದ್ದೂರಿಯಾಗಿ ನಡೆದಿದ್ದು, ರಾಜಬೀದಿ ಉತ್ಸವ ಇದಕ್ಕೆ ಮೆರುಗು ನೀಡಿತ್ತು.
ನಿನ್ನೆ ಮಧ್ಯಾರಾಧನೆ ವೈಭವ
ನಿನ್ನೆ ದಿನ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನದ ಒಳಗಡೆ ಜೀವಂತವಾಗಿ ಪ್ರವೇಶಿಸಿದ ದಿನ. ಈ ಮಧ್ಯಾರಾಧನೆಯ ಅಂಗವಾಗಿ ರಾಯರ ಬೃಂದಾವನಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರದೊಂದಿಗೆ ಮಹಾ ಅಭಿಷೇಕವು ಜಯನಗರದ 5ನೇ ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನೆರವೇರಿತು.

Also read: ಮಾತಾಪಿತೃಗಳನ್ನು ದೈವಸಮಾನರಾಗಿ ಕಾಣಬೇಕು: ರಾಘವೇಶ್ವರ ಶ್ರೀ
ಶ್ರೀ ಮಠಕ್ಕೆ ಆಗಮಿಸುವ ಸಹಸ್ರಾರು ಭಕ್ತ ಜನರು ರಾಯರ ದರ್ಶನ, ತೀರ್ಥ, ಫಲ ಮಂತ್ರಾಕ್ಷತೆ ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಿ ಶ್ರೀಮಠದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕಂಡು ಭಕ್ತರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಇನ್ನು, ಇಂದು ಗುರುರಾಯರ ಉತ್ತರಾರಾಧನೆ ನಿಮಿತ್ತ ಬೃಂದಾವನಕ್ಕೆ ವಿಶೇಷ ಅಭಿಶೇಕ ಹಾಗೂ ಅಲಂಕಾರ ಮಾಡಲಾಗಿತ್ತು. ಮುಂಜಾನೆ, ಜಯನಗರದ ಐದನೇ ಬಡಾವಣೆಯಲ್ಲಿ ರಾಜಬೀದಿ ಉತ್ಸವ ಅದ್ದೂರಿಯಾಗಿ ನಡೆಯಿತು.
ಶ್ರೀಮಠ ಇರುವ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಮಹಾರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ರಥೋತ್ಸವದ ಸಾಗುವ ಹಾದಿಯಲ್ಲಿ ಭಕ್ತರು ಭಜನೆ, ನೃತ್ಯ ಮಾಡಿ ಗುರುಸೇವೆ ಮಾಡಿದರು.
ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ಆರ್.ಕೆ. ವಾದಿಂದ್ರ ಆಚಾರ್, ನಂದ ಕಿಶೋರ್ ಆಚಾರ್ ಕೃಷ್ಣ ಗುಂಡಾಚಾರ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post