ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾರ್ಚ್ 31ರ ನಾಳೆ ಭಾನುವಾರವಾದರೂ ಎಲ್ಲ ಬ್ಯಾಂಕ್’ಗಳು Bank ಕಾರ್ಯನಿರ್ವಹಿಸಲಿದ್ದು, ಗ್ರಾಹಕರು ಎಂದಿನಂತೆ ವ್ಯವಹಾರಗಳನ್ನು ನಡೆಸಬಹುದಾಗಿದೆ.
ಈ ಕುರಿತಂತೆ ಭಾರತೀಯ ರಿಸರ್ವ್ ಬ್ಯಾಂಕ್ #RBI ಅಧಿಸೂಚನೆ ಹೊರಡಿಸಿದ್ದು, ತೆರಿಗೆ ಪಾವತಿದಾರರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುವ ದೃಷ್ಟಿಯಿಂದ, ಸರ್ಕಾರಿ ವ್ಯವಹಾರದೊಂದಿಗೆ ವ್ಯವಹರಿಸುವ ಆರ್’ಬಿಐ ಕಚೇರಿಗಳು ಮತ್ತು ಸರ್ಕಾರಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುವ ಏಜೆನ್ಸಿ ಬ್ಯಾಂಕ್’ಗಳ ಎಲ್ಲಾ ಗೊತ್ತುಪಡಿಸಿದ ಶಾಖೆಗಳು ತಮ್ಮ ಕೌಂಟರ್’ಗಳನ್ನು ತೆರೆಯಲು ಸೂಚಿಸಿದೆ.

Also read: ಕೋಲಾರ ಕಾಂಗ್ರೆಸ್ ಟಿಕೇಟ್ ಘೋಷಣೆ |ಮುನಿಯಪ್ಪ ಅಳಿಯನಿಗೆ ಛಾನ್ಸ್ ಮಿಸ್, ಗೌತಮ್ ಕಣಕ್ಕೆ
ಆರ್’ಬಿಐನಿಂದ ಗೊತ್ತುಪಡಿಸಿದ ಏಜೆನ್ಸಿ ಬ್ಯಾಂಕ್’ಳು ಸರ್ಕಾರಕ್ಕೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸುತ್ತವೆ. ಈ ನೆಟ್ವರ್ಕ್ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್’ಗಳು ಮತ್ತು ವಿದೇಶಿ ಬ್ಯಾಂಕ್ ಅನ್ನು ಒಳಗೊಂಡಿರುತ್ತದೆ, ಇದು ವ್ಯಾಪಕ ವ್ಯಾಪ್ತಿ ಮತ್ತು ಸರ್ಕಾರಿ ವ್ಯವಹಾರಗಳಿಗೆ ಪ್ರವೇಶವನ್ನು ಒದಗಿಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post