ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೆಚ್ಚಿರುವ ಐದು ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಇಂದಿನಿಂದ ಶಾಲಾ-ಕಾಲೇಜು ಆರಂಭವಾಗಿದ್ದು, ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ(ಬೈರತಿ) ಅವರು ತಮ್ಮ ಕೆ.ಅರ್. ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಮಮೂರ್ತಿ ನಗರದ ಅಂಬೇಡ್ಕರ್ ಪ್ರೌಢ ಶಾಲೆ, ಕಲ್ಕೆರೇ ಸರ್ಕಾರಿ ಪ್ರೌಢ ಶಾಲೆ, ಐಟಿಐ ವಿಧ್ಯಾ ಮಂದಿರ, ಕೆ.ಅರ್.ಪುರ ಸರ್ಕಾರಿ ಪ್ರೌಢ ಶಾಲೆ ಗಳಿಗೆ ಇಂದು ಬೆಳಿಗ್ಗೆ ಭೇಟಿ ನೀಡಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಈ ವೇಳೆ ಅವರು ಶಾಲೆಯಲ್ಲಿ ಹಾಜರಿದ್ದ ವಿಧ್ಯಾರ್ಥಿಗಳ ಅರೋಗ್ಯ, ಯೋಗಕ್ಷೇಮವನ್ನು ವಿಚಾರಿಸಿದರು. ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ವಿಧ್ಯಾರ್ಥಿಗಳಿಗೆ ಸೂಚಿಸಿದರು.
ಆಗಾಗ ಕೈಗಳನ್ನು ಸಾಬೂನಿನಿಂದ ತೊಳೆಯಬೇಕು, ಸ್ಯಾನಿಟೈಸರ್ ನಿಯಮಿತವಾಗಿ ಬಳಸಿ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡರೆ, ಕೊರೋನಾವನ್ನು ಹಿಮ್ಮೆಟ್ಟಿಸಲು ಸಾಧ್ಯ ಎಂದು ಸಚಿವರು ಕಿವಿಮಾತು ಹೇಳಿದರು.
ಸಚಿವರು ಭೇಟಿ ನೀಡಿದ ಎಲ್ಲಾ ಶಾಲೆಗಳಿಗೂ ಉಚಿತವಾಗಿ ನೀರಿನ ಬಾಟಲ್, ಸ್ಯಾನಿಟೈಸರ್, ಮಾಸ್ಕ್ ನೀಡಿದರು. ಕೆಲ ವಿಧ್ಯಾರ್ಥಿಗಳ ಸ್ಥಿತಿ ಗತಿ ವಿಚಾರಿಸಲಾಗಿ ಅಂತಹ ಕೆಲವು ವಿಧ್ಯಾರ್ಥಿಗಳಿಗೆ ದಿನಸಿ ಪದಾರ್ಥಗಳ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post