ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕರ್ನಾಟಕದಲ್ಲಿ ಎಲ್ಲಿಯಾದರೂ ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ #Alok Kumar ತಿಳಿಸಿದ್ದಾರೆ.
ಯಾವುದೇ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೇ ಅಂತವರ ವಿರುದ್ಧ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸಲಾಗುವುದು. ದುಡುಕಿನ ಮತ್ತು ಅಪಾಯಕಾರಿ ಚಾಲನೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Also read: ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಯುವಕ ಸ್ಥಳದಲ್ಲೇ ಸಾವು
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 105 ಕಿ.ಮೀ ವೇಗದಲ್ಲಿ ಸಂಚರಿಸುವವರಿಗೆ ದಂಡ ವಿಧಿಸಲಾಗುತ್ತದೆ. ಎಫ್‌ಐಆರ್‌ಗಳ ನೋಂದಣಿಗೆ 130 ಕಿಮೀ ಮಿತಿ ಇರಿಸಲಾಗಿದೆ. ಓವರ್ ಸ್ಪೀಡಿಂಗ್ ಅನ್ನು ಸಾಮಾನ್ಯವಾಗಿ ಕ್ಯಾಮೆರಾ ಪಾಯಿಂಟ್ ಬಳಿ ಸ್ಪಾಟ್ ಸ್ಪೀಡ್ ಎಂದು ಅಳೆಯಲಾಗುತ್ತದೆ. ವಿಭಾಗೀಯ ವೇಗವು ಎರಡು ಕ್ಯಾಮೆರಾ ಬಿಂದುಗಳ ನಡುವಿನ ಸರಾಸರಿ ವೇಗವಾಗಿದೆ. ಬೇರೆಡೆ ವೇಗವಾಗಿ ಓಡಿಸಿ ಕ್ಯಾಮರಾಗಳ ಬಳಿ ಚಾಲಕ ವೇಗ ಕಡಿಮೆ ಮಾಡಿದರೂ ಕೇಸ್ ಬುಕ್ ಆಗುತ್ತಾರೆ ಎಂದು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 











Discussion about this post