ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ಬೀದರ್ |
ಕಾರ್ಮಿಕರ ಕುಟುಂಬಗಳಿಗಾಗಿ ರಾಜ್ಯ ಸರ್ಕಾರ ಕಾರ್ಮಿಕ ಭವನಗಳನ್ನು ನಿರ್ಮಿಸಬೇಕು ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತಂತೆ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಅನುಕುಲಕ್ಕಾಗಿ ಮತ್ತು ಕಾರ್ಮಿಕರ ಹಿತಕ್ಕಾಗಿ ರಾಜ್ಯ ಸರಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಬೇಕು. ಕಾರ್ಮಿಕರಿಗೆ ಯಾವುದೆ ಜಾತಿ ಇಲ್ಲ ಕಾರ್ಮಿಕರಲ್ಲಿ ಎಲ್ಲ ಜಾತಿಯ ಜನರು ಇರುತ್ತಾರೆ. ಕಾರ್ಮಿಕರ ಮಕ್ಕಳ ಮದುವೆಗಾಗಿ ಕಾರ್ಮಿಕ ಭವನ ನಿರ್ಮಾಣ ಮಾಡಿದರೆ ಕಾರ್ಮಿಕರಿಗೆ ಬಹಳ ಸಹಾಯವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಕಾರ್ಮಿಕರ ಅನುಕೂಲಕ್ಕಾಗಿ ರಾಜ್ಯ ಸರರ್ಕಾರವು ಯಾವ ಯಾವ ಸ್ಥಳಗಳಲ್ಲಿ ಶ್ರಮಿಕ ಭವನಗಳನ್ನು ನಿರ್ಮಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಈ ಭವನಗಳಿಗೆ ಎಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಜಿಲ್ಲಾವಾರು ಅಂಕಿ ಅಂಶಗಳನ್ನು ಒದಗಿಸಬೇಕು, ಪ್ರಸಕ್ತ ಸಾಲಿನಲ್ಲಿ ರಾಜ್ಯದ ಯಾವ ಯಾವ ಸ್ಥಳಗಳಲ್ಲಿ ಶ್ರಮಿಕ ಭವನಗಳು ನಿರ್ಮಾಣ ಮಾಡಲು ಅಂದಾಜಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕರ ಮಕ್ಕಳ ಮದುವೆಗಾಗಿ ಕಾರ್ಮಿಕ ಭವನ ನಿರ್ಮಾಣ ಮಾಡಬೇಕು ಎಂದು ಅವರು ಕಾರ್ಮಿಕ ಸಚಿವರಾದ ಸಂತೋಷ ಎಸ್ ಲಾಡ್ ಅವರಿಗೆ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾವು ಕಾರ್ಮಿಕರ ಪರ , ದಿನದಲಿತರ ಪರ, ಬಡವರ ಪರ ಎನ್ನುತ್ತಾರೆ. ಹೀಗಾಗಿ ಕಾರ್ಮಿಕರ ಭವನ ನಿರ್ಮಾಣ ಮಾಡಿದರೆ ಬಡವರ ಮಕ್ಕಳ ಮದುವೆ ಉಚಿತವಾಗಿ ಆಗುತ್ತದೆ. ನಮ್ಮ ಜಿಲ್ಲೆಯಲ್ಲಿ ಒಟ್ಟು 2 ಲಕ್ಷ 34 ಸಾವಿರ ನೋಂದಾಯಿತ ಸಂಘಟಿತ ಕಾರ್ಮಿಕ ಸದಸ್ಯರಿದ್ದಾರೆ. ಅದರಲ್ಲಿ ನಾಲ್ಕು ಸಾವಿರ ಅಸಂಘಟಿತ ಸದಸ್ಯರಿದ್ದಾರೆ. ಕಾರ್ಮಿಕರು ದಿನವಿಡೀ ಕೆಲಸ ಮಾಡಿದರೆ ಮಾತ್ರ ಅವರ ಜೇಬಿಗೆ ಹಣ ಸೇರುತ್ತದೆ. ಹೀಗಾಗಿ ಅವರ ಮಕ್ಕಳ ಮದುವೆ ಅನುಕೂಲಕ್ಕಾಗಿ ಇಡೀ ರಾಜ್ಯದಲ್ಲಿ ಕಾರ್ಮಿಕ ಭವನ ನಿರ್ಮಾಣವಾಗಬೇಕು. ಬೀದರ್’ನಲ್ಲಿ ಇಗಾಗಲೇ 15 ಗುಂಟೆ ಸ್ಥಳ ನೀಡಿ ಜಿಲ್ಲಾಧಿಕಾರಿಗಳು ಆದೇಶ ಸಹ ನೀಡಿದ್ದಾರೆ. ಹೀಗಾಗಿ ಇಡೀ ರಾಜ್ಯದ ಎಲ್ಲ ಕ್ಷೇತ್ರಕ್ಕೆ ಸುಮಾರು 300 ಕೋಟಿ ರೂ. ನೀಡಿದರೆ ಉತ್ತಮವಾದ ಕಾರ್ಮಿಕ ಭವನ ನಿರ್ಮಾಣ ವಾಗುತ್ತದೆ ಎಂದು ವಿವರಿಸಿದರು.
ಬೆಲ್ದಾಳೆ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್, ಐದು ಜಿಲ್ಲೆಯಲ್ಲಿ ಶ್ರಮಿಕ ಭವನಗಳಿವೆ. ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬೆಳಗಾವಿ, ಕಲ್ಬುರ್ಗಿ, ಚಾಮರಾಜನಗರದಲ್ಲಿ ಸೇರಿವೆ. ಶ್ರಮಿಕ ಭವನಕ್ಕೆ ದುಡ್ಡು ಖರ್ಚು ಮಾಡಿದ್ದನ್ನು ವಿವರಣೆ ನೀಡಿದರು. ಬೀದರ್ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯ ಕಾರ್ಮಿಕರು ಇರುವ ಕಾರಣ ಮುಂದಿನ ದಿನಗಳಲ್ಲಿ ಕಾರ್ಮಿಕ ಭವನ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post