ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಾವುದೇ ಜಾತಿ, ಧರ್ಮ ಭೇದವಿಲ್ಲದ ರಾಜ್ಯದ ಎಲ್ಲಾ ಜನತೆಗೆ 5 ಗ್ಯಾರೆಂಟಿ ಯೋಜನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ CM Siddaramaiah ಘೋಷಿಸಿದ್ದು, ಪ್ರಸ್ತುತ ಆರ್ಥಿಕ ವರ್ಷದಿಂದಲೇ ಯೋಜನೆ ಜಾರಿಗೆ ತರಲಾಗುವುದು ಎಂದು ಹೇಳಿದರು.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.

- ಗೃಹ ಜ್ಯೋತಿ: ವಾಗ್ದಾನ ನೀಡಿದಂತೆ ಎಲ್ಲರಿಗೂ 200 ಯುನಿಟ್ ವಿದ್ಯುತ್ ಉಚಿತ. 12 ತಿಂಗಳ ಸರಾಸರಿ ಆಧಾರಲ್ಲಿ 200 ಯುನಿಟ್‌ವರೆಗಿನ ವಿದ್ಯುತ್ ಬಳಕೆಗೆ ಬಿಲ್ ಪಾವತಿಸಬೇಕಿಲ್ಲ. ಜುಲೈ ತಿಂಗಳಿನಿಂದ ಈ ಯೋಜನೆ ಅನುಷ್ಟಾನಗೊಳ್ಳಲಿದ್ದು, ಇಲ್ಲಿಯವರೆಗಿನ ವಿದ್ಯುತ್ ಬಿಲ್‌ಗಳನ್ನು ಪಾವತಿಸಬೇಕು.
- ಗೃಹ ಲಕ್ಷ್ಮಿ: ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ 18ವರ್ಷ ತುಂಬಿದ ಗೃಹಿಣಿಯರು, ಬ್ಯಾಂಕ್ ಖಾತೆ, ಆಧಾರ ಕಾರ್ಡ್‌ನೊಂದಿಗೆ ಜೂನ್ 15ರಿಂದ ಜುಲೈ 15ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಳಿಕೆ ಆಗಸ್ಟ್‌ನಿಂದ ಸಂಬಂಧಪಟ್ಟವರ ಬ್ಯಾಂಕ್ ಖಾತೆಗೆ 2000ರೂ. ಜಮಾ ಮಾಡಲಾಗುವುದು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಿಂದ ಯೋಜನೆ ಜಾರಿಗೆ ಬರಲಿದೆ.
- ಅನ್ನಭಾಗ್ಯ: ಜುಲೈ 1ನೇ ತಾರೀಖಿನಿಂದ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ತಲಾ 10ಕೆಜಿ ಅಕ್ಕಿ ವಿತರಣೆ.
- ಮಹಿಳೆಯರಿಗೆ ಉಚಿತ ಪ್ರಯಾಣ: ಶಕ್ತಿ ಯೋಜನೆಯಡಿ ರಾಜ್ಯದ ಒಳಗಡೆ ಪ್ರಯಾಣಿಸಲು ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ. ಎಸಿ, ರಾಜಹಂಸ ಮತ್ತು ನಾನ್ ಎಸಿ ಬಸ್ ಹೊರತುಪಡಿಸಿಇ ಇದೇ ತಿಂಗಳ 11ರಿಂದ ಉಚಿತ ಪ್ರಯಾಣಕ್ಕೆ ಅವಕಾಶ.
- ಯುವನಿಧಿ: 2022-23ನೇ ಸಾಲಿನಲ್ಲೆ ತೇರ್ಗಡೆ ಹೊಂದಿದ ಎಲ್ಲಾ ಪದವೀಧರರಿಗೆ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪ್ರತಿ ತಿಂಗಳು 3000ರೂ. ಹಾಗೂ ಡಿಪ್ಲೋಮಾ ಪದವೀಧರರಿಗೆ 1500ರೂ. ನೀಡಲಾಗುವುದು.












Discussion about this post