ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಾರಿಗೆ ನೌಕರರ ವೇತನ ಪರಿಷ್ಕರಣೆ ಕುರಿತು ಈ ವಾರವೇ ಅಂತಿಮ ನಿರ್ಧಾರ ಕೈಗೊಳ್ಳದೆ ಇದ್ದರೆ ಎಪ್ರಿಲ್ 7 ರಿಂದ ಮುಷ್ಕರ ನಡೆಸಲಾಗುವುದು ಎನ್ನುತ್ತಾರೆ ಬಿಎಂಟಿಸಿ ಸಿಬ್ಬಂದಿಗಳು.
ಕಲ್ಪ ಮೀಡಿಯಾ ಹೌಸ್ ಜೊತೆಗೆ ಮಾತಿಗೆ ಸಿಕ್ಕ ಬಿಎಂಟಿಸಿ ಬಸ್‌ನ ನಿರ್ವಾಹಕ ವೇತನ ಪರಿಷ್ಕರಣೆ ಬೇಡಿಕೆ ಈಡೇರಿಕೆ ಬಾಕಿ ಉಳಿದಿದೆ ಸರ್ಕಾರ ತಾರತಮ್ಯ ಬಿಡಬೇಕು , ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಒಂದೇ ಸಂಸ್ಥೆ ನೌಕರರು ಆಗಿದ್ದು ಎಪ್ರಿಲ್ 1 ರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡುತ್ತಿರುವುದಾಗಿ ಹೇಳುತ್ತಾರೆ ಬನಶಂಕರಿ ಡಿಪೋದಿಂದ ಯಶವಂತಪುರ ಮಾರ್ಗವಾಗಿ ಹೋಗುವ ಹೆಸರು ಹೇಳಲು ಇಚ್ಛಿಸದ ನಿರ್ವಾಹಕರು.
ಜನವರಿ 2020ರಲ್ಲಿ ವೇತನ ತಾರತಮ್ಯವನ್ನು ಸರಿ ಪಡಿಸಬೇಕಾಗಿತ್ತು. ಆದರೆ 2021 ಎಪ್ರಿಲ್ ತಿಂಗಳು ಬಂದು ಸರ್ಕಾರ ಮಾತ್ರ ವೇತನ ಪರಿಷ್ಕರಣೆ ಮಾಡುವ ಬಗ್ಗೆ ಚಿಂತನೆ ನಡೆಸಿಲ್ಲ. ಎ.6 ರವರೆಗೆ ಕಪ್ಪು ಬಣ್ಣದ ಪಟ್ಟಿ ಧರಿಸಿ ಮೌನ ಪ್ರತಿಭಟನೆ, ಎ.7 ರ ಹೊತ್ತಿಗೆ ವೇತನ ಪರಿಷ್ಕರಣೆ ಆಗದೇ ಇದ್ದಲ್ಲಿ ಅನಿರ್ಧಿಷ್ಟವಧಿ ಬಸ್ ಸಂಚಾರ ವ್ಯವಸ್ಥೆ ಇಲ್ಲದೆ ಪ್ರತಿಭಟನೆ ನಡೆಸಲಾಗುತ್ತದೆ. ಕೋಡಿಹಳ್ಳಿ ಚಂದ್ರಶೇಖರ್ ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಮೆಜಿಸ್ಟಿಕ್’ನಿಂದ ತಾವರೆಕೆರೆಗೆ ಹೋಗುವ ಬಿಎಂಟಿಸಿ ಬಸ್’ನ ಮಹಿಳಾ ನಿರ್ವಾಹಕರು ಮಾತನಾಡಿ, ನನಗೆ ಬರುವ ಸಂಬಳ 16 ಸಾವಿರ, ಅದರಲ್ಲಿ ಮನೆ ಬಾಡಿಗೆ 6 ಸಾವಿರ ಉಳಿದ ಹಣದಲ್ಲಿ ಮನೆ ನಿರ್ವಹಣೆ ಹೇಗೆ ಮಾಡುವುದು ಹಾಗೂ ನನಗೆ ಒಬ್ಬ ಮಗ ಇದ್ದು ಅವನಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸುವ ಆಸೆ ನನಗೆ. ಆದರೆ ಸರ್ಕಾರ ಮಾತ್ರ ಕಣ್ಣ ಮುಚ್ಚಾಲೆ ಆಡುತ್ತಿದೆ. ವೇತನ ಪರಿಷ್ಕರಣೆ ವಿಚಾರದಲ್ಲಿ ತಾರತಮ್ಯ ತೋರುತ್ತಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಮಹಿಳಾ ಸಿಬ್ಬಂದಿ.
ಒಟ್ಟಿನಲ್ಲಿ ಸರ್ಕಾರ ಬಿಎಂಟಿಸಿ ಪ್ರಯಾಣ ಮಾಡುವ ಸಾವಿರಾರು ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post