ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಸಾಹಸಸಿಂಹ ದಿ. ವಿಷ್ಣುವರ್ಧನ್ ಅವರ ಪುತ್ರಿ, ಖ್ಯಾತ ನಟ ಅನಿರುದ್ ಅವರ ಧರ್ಮಪತ್ನಿ ಶ್ರೀಮತಿ ಕೀರ್ತಿ ಅನಿರುದ್ ಅವರು ರಾಷ್ಟ್ರೀಯ ಪತ್ರಿಕಾ ಸಮಿತಿ ವತಿಯಿಂದ ಕೊಡಮಾಡುವ ರಾಷ್ಟ್ರೀಯ ಮಹಿಳಾ ಸಾಧಕಿಯರ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ನ್ಯಾಶನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ಪ್ರತಿವರ್ಷ ಕೊಡುಮಾಡುವ ಮಹಿಳಾ ಸಾಧಕಿಯರ ಪ್ರಶಸ್ತಿಯನ್ನು ಕೀರ್ತಿ ಅವರು ವಸ್ತ್ರಾಲಂಕಾರ ವಿಭಾಗದಲ್ಲಿ ಪಡೆದಿದ್ದಾರೆ.
ಫ್ಯಾಶನ್ ಡಿಸೈನ್ ಹಾಗೂ ಜೀವನಶೈಲಿ ಕ್ಷೇತ್ರದಲ್ಲಿ ಮಹೋನ್ನತ ಸಾಧನೆಗಾಗಿ ಕೀರ್ತಿ ಅವರನ್ನು ಗುರುತಿಸಲಾಗಿದೆ. ಸಾಮಾಜಿಕ, ನ್ಯಾಯ ಮತ್ತು ನಿಸ್ವಾರ್ಥ ಪರಿಣಾಮಕಾರಿ ಸೇವೆಯ ಮೂಲಕ ರಾಜ್ಯ ಹಾಗೂ ರಾಷ್ಟ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ ಎಂದು ಅವರನ್ನು ಪ್ರಶಂಸಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post