ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇತ್ತೀಚೆಗೆ ಜಮ್ಮು ಕಾಶ್ಮೀರ ರಜೌರಿಯಲ್ಲಿ ಉಗ್ರರ ವಿರುದ್ದ ನಡೆದ ಹೋರಾಟದಲ್ಲಿ ವೀರಸ್ವರ್ಗ ಸೇರಿದ ರಾಜ್ಯದ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ Captain Pranjal ನಿವಾಸಕ್ಕೆ ಬ್ರಾಹ್ಮಣ ಮಹಾಸಭಾ ಪ್ರಮುಖರು ಭೇಟಿ ನೀಡಿ, ನಮನ ಸಲ್ಲಿಸಿದರು.
ಬನ್ನೇರುಘಟ್ಟ-ಜಿಗಣಿ ರಸ್ತೆಯಲ್ಲಿರುವ ನಂದನವನದ ನಿವಾಸಕ್ಕೆ ಅಖಿಕ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿ ಹಾಗೂ ಪದಾಧಿಕಾರಿಗಳು ಭೇಟಿ ನೀಡಿದರು.
ಕ್ಯಾ.ಪ್ರಾಂಜಲ್ ಅವರು ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ ವೀರ ಯೋಧನಿಗೆ ಮಹಾಸಭಾದ ವತಿಯಿಂದ ನಮನ ಸಲ್ಲಿಸಲಾಯಿತು.
Also read: ಚಕ್ಕುಲಿ ಗಂಟಲಲ್ಲಿ ಸಿಲುಕಿ ಒಂದೂವರೆ ವರ್ಷ ಕಂದಮ್ಮ ದುರ್ಮರಣ
ಈ ವೇಳೆ ಮಹಾಸಭಾದ ಪದಾಧಿಕಾರಿಗಳಾದ ವೈ.ಎ. ಸುಧಾಕರ್ ಬಾಬು, ಕೆ.ಎನ್. ಛಾಯಾಪತಿ, ಕಾರ್ತಿಕ್ ಬಾಪಟ್, ಅರುಣ್ ಹಿರಣ್ಣಯ್ಯ, ಸುಬ್ರಹ್ಮಣ್ಯ, ಅನಂತ್ ಹಾಗೂ ಬಿ.ಕೆ. ಪ್ರಕಾಶ್ ಭಾರದ್ವಾಜ್ ಅವರುಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post