ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಹಲವು ಕಡೆಗಳಲ್ಲಿ ಮುಂದಿನ ಒಂದು ವರ್ಷದಲ್ಲಿ ಕೆಫೆ ಸಂಜೀವಿನಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ CM Siddaramaiah ಹೇಳಿದ್ದಾರೆ.
ತಮ್ಮ ಬಜೆಟ್ ಭಾಷಣದಲ್ಲಿ ಈ ಘೋಷಣೆ ಮಾಡಿರುವ ಅವರು, ಈ ಹಣಕಾಸು ವರ್ಷದಲ್ಲಿ ರಾಜ್ಯದೆಲ್ಲೆಡೆ ಸುಮಾರು 7.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಫೆ ಸಂಜೀವಿನಿಯನ್ನು ಆರಂಭಿಸಲಾಗುತ್ತದೆ. ಇದು ಸುಮಾರು 50 ಮಹಿಳೆಯರು ನಡೆಸುವಂತಹ ಕೆಫೆ ಆಗಿರಲಿದೆ ಎಂದಿದ್ದಾರೆ.
ಏನಿದು ಕೆಫೆ ಸಂಜೀವಿನಿ?
ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ಸುಮಾರು 50 ಮಹಿಳೆಯರೇ ನಡೆಸುವ ಕ್ಯಾಂಟೀನ್ ಉದ್ಯಮವಾಗಿದೆ.
Also read: ರಾಕಿಂಗ್ ಸ್ಟಾರ್ ದಂಪತಿಯ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ: ಪುಟ್ಟ ಅಂಗಡಿಯಲ್ಲಿ ಯಶ್ ಐಸ್ ಕ್ರೀಂ ಖರೀದಿ
ರಾಜ್ಯದೆಲ್ಲೆಡೆ ಸುಮಾರು 7.50 ಕೋಟಿ ರೂಪಾಯಿ ವೆಚ್ಚದಲ್ಲಿ ಕೆಫೆ ಸಂಜೀವಿನಿಯನ್ನು ಆರಂಭಿಸಲಾಗುತ್ತದೆ. ಇದು ಸುಮಾರು 50 ಮಹಿಳೆಯರು ನಡೆಸುವಂತಹ ಕೆಫೆ ಆಗಿರಲಿದೆ. ಈ ಕ್ಯಾಂಟೀನ್’ಗಳು ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಲಿದೆ.
ಪ್ರಮುಖವಾಗಿ, ಕೈಗೆಟಕುವ ದರದಲ್ಲಿ ಆರೋಗ್ಯಕರ, ನೈರ್ಮಲ್ಯಯುತ ಆಹಾರವನ್ನು ಸ್ಥಳೀಯ ಮಟ್ಟದಲ್ಲಿ ಪೂರೈಸುವ ಯೋಜನೆಯಾಗಿದೆ.
ಇಂದಿರಾ ಕ್ಯಾಂಟೀನ್ ಈ ಕೆಫೆ ಸಂಜೀವಿನಿ ಸ್ಥಳೀಯ ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ, ಸ್ಥಳೀಯ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿರುವಂತಿದೆ. ಇದಕ್ಕೆ ವ್ಯತಿರಿಕ್ತವಾಗಿ ಇಂದಿರಾ ಕ್ಯಾಂಟೀನ್ ಅಥವಾ ನಮ್ಮ ಕ್ಯಾಂಟೀನ್’ನಲ್ಲಿ ನಾಗರಿಕರಿಗೆ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟ ವಿತರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post