ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅವರು ಹಲಾಲ್ Halal ಮಾಡಿದ್ದನ್ನು ನಾವು ತಿನ್ನಬೇಕಾ? ನಮಗೇನು ಅಂತಹುದ್ದಿದೆ. ನಮ್ಮವರಿಂದಲೇ ಮಾಂಸ ಖರೀದಿಸಿ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ MLA Renukacharya ಹೇಳಿದ್ದಾರೆ.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿರುವ ಹಲಾಲ್ ಪದ್ದತಿಯನ್ನು ನಿಷೇಧ ಮಾಡಬೇಕು. ಅವರು ಹಲಾಲ್ ಮಾಡಿದ್ದನ್ನು ನಾವು ತಿನ್ನಬೇಕಾ? ನಮಗೇನು ಅಂತಹುದ್ದಿದೆ? ಎಂದು ಪ್ರಶ್ನಿಸಿದ್ದಾರೆ.
ಅವರು ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ನಮ್ಮವರೂ ಸಹ ಎಲ್ಲ ರಂಗದಲ್ಲೂ ವ್ಯಾಪಾರ ವ್ಯವಹಾರ ಮಾಡಬೇಕು. ನಮ್ಮವರೂ ಸಹ ಮಾಂಸದ ಅಂಗಡಿಗಳು, ಚಪ್ಪಲಿ ವ್ಯಾಪಾರ ಸೇರಿದಂತೆ ಎಲ್ಲ ವ್ಯವಹಾರ ಮಾಡಬೇಕು. ನ್ಯಾಯಯುತವಾಗಿ ಮಾಡುವ ಯಾವುದೇ ವ್ಯವಹಾರ ಅವಮಾನಕರವಲ್ಲ. ಇದಕ್ಕಾಗಿ ನಮ್ಮವರು ಮುಂದೆ ಬರಬೇಕು. ಹೀಗೆ, ವ್ಯವಹಾರ ಮಾಡಲು ಮುಂದಾಗುವವರಿಗೆ ನಾನು ಧನ ಸಹಾಯ ಮಾಡುತ್ತೇನೆ ಎಂದರು.
Also read: ಅಧಿಕ ಯುರೇನಿಯಂ ಅಂಶ ಕ್ಯಾನ್ಸರ್, ಕಿಡ್ನಿ ಸಂಬಂಧಿ ರೋಗಕ್ಕೆ ಕಾರಣ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post