ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬನಶಂಕರಿ 3ನೆಯ ಹಂತದ ಹೊಸಕೆರೆ ಹಳ್ಳಿಯಲ್ಲಿರುವ ಶ್ರೀಗುರುದತ್ತ ಬಡಾವಣೆಯಲ್ಲಿ 17ನೆಯ ವರ್ಷದ ಗಣೇಶೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ.
ಶ್ರೀ ಶಕ್ತಿ ಗಣಪತಿ ದೇವಾಲಯದ ಬಲ ಬದಿಯ ರಸ್ತೆಯಲ್ಲಿ – ಸುಂದರವಾದ ವೇದಿಕೆ ನಿರ್ಮಾಣ ಮಾಡಿ ಗಣಪತಿ ಪ್ರತಿಷ್ಠೆ ಪ್ರತಿಷ್ಠಾಪನೆ, ಮಹಾಮಂಗಳಾರತಿ ನೇರವೇರಿಸಿ ವಿಜೃಂಭಣೆಯಿAದ ಪೂಜೆ ಸಲ್ಲಿಸಲಾಯಿತು.

ಬಡಾವಣೆಯ ಸಮಸ್ತ ಭಕ್ತರಿಗೂ ತೀರ್ಥ, ಪ್ರಸಾದ ವಿತರಿಸಲಾಯಿತು. ಸಂಜೆ ಬಡಾವಾಣೆಯ ಮಕ್ಕಳು, ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

Also read: ದಾವಣಗೆರೆ-ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳಿಗೆ ಪರ್ಯಾಯ ನಿವೇಶನ: ಸಂಸದ ಸಿದ್ದೇಶ್ವರ್
ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಪಾದರಿಂದ ಪ್ರತಿಷ್ಠಾಪನೆಗೊಂಡ ಶ್ರೀ ಶಕ್ತಿ ಗಣಪತಿಗೆ ಬೆಳ್ಳಿಯ ಕಿರೀಟ, ಮುಖವಾಡ, ಕವಚವನ್ನು ಧಾರಣೆ ಮಾಡಿ, ವಿಶೇಷ ಅಲಂಕಾರ ಮಾಡಿ, ಕಡುಬಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾತ್ರಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಂತರ ಗಣಪತಿ ಮೆರವಣಿಗೆಯಲ್ಲಿ ತಮಟೆಯ ಸದ್ದಿಗೆ ಬಡಾವಣೆಯ ಸಮಸ್ತ ಭಕ್ತರು ಹಾಗೂ ಮಕ್ಕಳು ಹೆಜ್ಜೆ ಹಾಕಿ, ಗಣಪತಿ ವಿಸರ್ಜನೆಯೊಂದಿಗೆ 17ನೆಯ ವರ್ಷದ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post