ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAB) ಮತ್ತು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ (BCAS) ಸಹಯೋಗದೊಂದಿಗೆ ಆಗಸ್ಟ್ 5 ರವರೆಗೆ ಏರ್‌ಪೋರ್ಟ್‌ನ ಆವರಣದಲ್ಲಿ “ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ”ವನ್ನು ಆಚರಿಸಲಾಗುತ್ತಿದೆ.
ಬಿಐಎಎಲ್‌ನ ಸಿಇಒ ಹರಿ ಮರಾರ್‌ಹಾಗೂ ಬಿಸಿಎಎಸ್‌ನ ಪ್ರಾದೇಶಿಕ ನಿರ್ದೇಶಕರಾದ ರಾಜೀವ್ ಕುಮಾರ್ ರೈ ಸಪ್ತಾಹವನ್ನು ಉದ್ಘಾಟಿಸಿದರು.

ಹಲವಾರು ಮೂಲ ಉಪಕರಣ ತಯಾರಕರು (OEMs) ವಿಮಾನ ನಿಲ್ದಾಣಗಳ ಸುರಕ್ಷತೆಯನ್ನು ಹೆಚ್ಚಿಸುವ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ. ಈ ಪ್ರದರ್ಶನ ಮತ್ತು ಸಂಸ್ಕೃತಿ ಸಪ್ತಾಹದ ಉದ್ದೇಶವು ವಿಮಾನಯಾನ ಭದ್ರತಾ ಅಭ್ಯಾಸಗಳು, ತಂತ್ರಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ, ವಿಮಾನಗಳಲ್ಲಿನ ಭದ್ರತಾ ಪ್ರಕ್ರಿಯೆಗಳ ಬಗ್ಗೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ವಿವರಿಸಿದರು.

ವಾಯುಯಾನ ಭದ್ರತಾ ಸಂಸ್ಕೃತಿ ಸಪ್ತಾಹ ಅನ್ನು ಭಾರತದ ವಿಮಾನ ನಿಲ್ದಾಣಗಳಲ್ಲಿ ನಡೆಸಲಾಗುತ್ತಿದೆ ಮತ್ತು KIAB ಸಹ ಇದರ ಭಾಗವಾಗಿದೆ.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post