ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡೂಪ್ಲಿಕೇಟ್ ಸಿಎಂ ಡಿ.ಕೆ. ಶಿವಕುಮಾರ್ DKShivakumar ಅವರು ಕೊಟ್ಟ ಸಲಹೆಯ ಮೇರೆಗೆ ತಮ್ಮ ಪುತ್ರನ ಕಾಸಿಗಾಗಿ ಹುದ್ದೆ ವಿಡಿಯೋ ವಿವಾದಕ್ಕೆ ಸಿಎಸ್’ಆರ್ ಫಂಡ್ ಸ್ವರೂಪ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ HDKumaraswamy ಅವರು ಗಂಭೀರ ಆರೋಪ ಮಾಡಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ರಾಜಕೀಯ ದ್ವೇಷ, ಅಸೂಯೆಯಿಂದ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ, ಅವರು ಈ ವಿಡಿಯೋಗೆ ಸಂಬಂಧಿಸಿ ಸತ್ಯಗಳನ್ನು, ಸಾಕ್ಷ್ಯಗಳನ್ನು ತಿರುವಿದ ರೀತಿ ನೋಡಿದರೆ ನನಗೆ ಅತೀವ ಅಚ್ಚರಿ ಉಂಟಾಗಿದೆ ಎಂದರು.

ಒಂದು ಶಾಲೆಗೆ 2.5 ಲಕ್ಷ ರೂ. ಸಿಎಸ್’ಆರ್ ಫಂಡ್ ತಗೋತೀರಾ? ಯಾರ ಕಿವಿಯ ಮೇಲೆ ಹೂವು ಇಡಲು ಹೊರಟಿದ್ದಾರೆ ಇವರು? ವಿಧಾನಮಂಡಲ ಅಧಿವೇಶನದಲ್ಲಿ ನಾನು ಇದನ್ನು ಪ್ರಸ್ತಾಪ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ನೇರ ಮಾತುಗಳಲ್ಲಿ ಹೇಳಿದರು.

Also read: ಬಡವ ಶ್ರೀಮಂತ, ಮೇಲು-ಕೀಳಿಗೆ ಜಾತಿ ವ್ಯವಸ್ಥೆಯೇ ಕಾರಣ: ಸಿಎಂ ಸಿದ್ದರಾಮಯ್ಯ ಅಭಿಮತ
ವಿವೇಕಾನಂದ ಅನ್ನುವವರು ಯಾರು ಅಂತ ಯತೀಂದ್ರ ಅವರು ಯಾಕೆ ಕೇಳಿದರು? ಕ್ಷೇತ್ರದ ಕೆಡಿಪಿ ಸಮಿತಿ ಅಧ್ಯಕ್ಷರಾದ ಅವರಿಗೆ ತಮ್ಮ ಕ್ಷೇತ್ರದ ಆಉu ಯಾರೂ ಎಂದು ಗೊತ್ತಿಲ್ಲವಾ? ಸಿದ್ದರಾಮಯ್ಯನ ಹುಂಡಿ ಗ್ರಾಮದ ಸರಕಾರಿ ಶಾಲೆಗೂ ಯಾಕೆ ಹಣ ಕೊಟ್ಟಿಲ್ಲ? ಆ ಶಾಲೆ ಹೇಗಿದೆ ಎನ್ನುವುದು ಇವರಿಗೆ ಗೊತ್ತಿಲ್ಲವಾ? ಅವರ ಊರಿನ ಶಾಲೆ ಫೋಟೋ ಕೊಡಿ ನೋಡೋಣ. ವರಣಾ ನೋಡಿಕೊಳ್ಳಲು ಬೇರೆ ಅಧಿಕಾರಿ ಇದ್ದಾರೆ. ಮಹದೇವ್ ಬಳಿ ಯಾಕೆ ಅದು ಹೋಯಿತು ಎಂದು ಪ್ರಶ್ನೆ ಮಾಡಿದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post