No Result
View All Result
Rani KoHEnur Calls Transgender Bill “Absurd”, Questions Lawmakers in Explosive Podcast Interview
English Articles

Rani KoHEnur Calls Transgender Bill “Absurd”, Questions Lawmakers in Explosive Podcast Interview

by ಕಲ್ಪ ನ್ಯೂಸ್
April 9, 2026
0

Kalpa Media House  |  Mumbai | Artist, drag performer, and activist Rani KoHEnur (Sushant Divgikar) has ignited widespread conversation following...

Read moreDetails
RPF team Seized 40.495 Kgs Ganja at Ballari Railway station

RPF team Seized 40.495 Kgs Ganja at Ballari Railway station

April 7, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Extension of Special Train Services to Manage Summer Rush

April 7, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
  • Advertise With Us
  • Grievances
  • About Us
  • Contact Us
Friday, April 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಸಂವಿಧಾನ ಶಿಲ್ಪಿಗೆ ಹೆಜ್ಜೆ ಹೆಜ್ಜೆಗೂ ಅವಮಾನ ಮಾಡಿದವರು ಕಾಂಗ್ರೆಸ್ಸಿಗರು

ಭೀಮ ಹೆಜ್ಜೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
April 12, 2025
in ಬೆಂಗಳೂರು ನಗರ
0
ಸಂವಿಧಾನ ಶಿಲ್ಪಿಗೆ ಹೆಜ್ಜೆ ಹೆಜ್ಜೆಗೂ ಅವಮಾನ ಮಾಡಿದವರು ಕಾಂಗ್ರೆಸ್ಸಿಗರು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ವರದಿ: ಡಿ.ಎಲ್. ಹರೀಶ್

ಕಾಂಗ್ರೆಸ್‌ ಪಕ್ಷ ಹೆಜ್ಜೆ ಹೆಜ್ಜೆಗೂ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ #Ambedkar ಅವರನ್ನು ಅವಮಾನಿಸುತ್ತಲೇ ಬಂದಿದೆ. ಅಂಬೇಡ್ಕರ್‌ ಗೆದ್ದಂತಹ ಹಿಂದೂ ಬಾಹುಳ್ಯದ ಕ್ಷೇತ್ರಗಳನ್ನೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತಹ ದುರುಳ ನೀತಿ ತೋರಿದವರು ಕಾಂಗ್ರೆಸ್ಸಿಗರು. ಈಗ ದಲಿತರ ವೋಟ್‌ ಬ್ಯಾಂಕ್‌ಗಾಗಿ ಮೊಸಳೆ ಕಣ್ಣೀರಿಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ #Pralhad Joshi ತೀವ್ರ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು “ಭೀಮ ಹೆಜ್ಜೆ” ಶತಮಾನ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್‌ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಲೆಂದೇ ಕಾಂಗ್ರೆಸ್‌ ಅಂದು ಅಂಬೇಡ್ಕರ್‌ ಗೆದ್ದಂತಹ ಜೈಸೂರು, ಕುಲ್ಲಾ, ಹರೀದ್ಪುರ ಪ್ರದೇಶಗಳನ್ನು ಕ್ಷೇತ್ರಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು ಎಂದು ಗಂಭೀರ ಆರೋಪ ಮಾಡಿದರು.
ದೇಶಕ್ಕೆ ಒಂದು ಸಂವಿಧಾನದ ಸುಭದ್ರ ಚೌಕಟ್ಟು ನಿರ್ಮಿಸಿಕೊಟ್ಟಂತಹ ಮಾಹಾನ್‌ ನಾಯಕ ಅಂಬೇಡ್ಕರ್‌ ಅವರಿಗೆ ಕಾಂಗ್ರೆಸ್‌ ಪಕ್ಷ ಸ್ವತಂತ್ರ ಪೂರ್ವದಿಂದಲೂ ಮಹಾ ಅಮಾನಗಳನ್ನೇ ಮಾಡುತ್ತ ಬಂದಿದೆ. ಗಾಂಧಿ, ನೆಹರು ಕಾಲದಿಂದ ಇಲ್ಲಿವರೆಗೂ ಇದು ಮುಂದುವರಿದೇ ಇದೆ. ಪ್ರಸ್ತುತದಲ್ಲಿ ಭೀಮ ಹೆಜ್ಜೆ ಶತಮಾನ ಸಂಭ್ರಮ ಆಚರಿಸದ ರಾಜ್ಯ ಕಾಂಗ್ರೆಸ್‌ ಸರ್ಕಾರದ ಅವಗಣನೆಯೂ ಇದಕ್ಕೊಂದು ನಿದರ್ಶನ ಎಂದರು.

ಅಂಬೇಡ್ಕರ್‌ ಚುನಾವಣೆ ಮೂಲಕ ಸಂವಿಧಾನ ಸಭೆ ಪ್ರವೇಶಿಸಲು ಬಯಸಿದರೆ ಎರಡು ಬಾರಿಯೂ ಬೆಂಬಲಿಸದ ಕಾಂಗ್ರೆಸ್‌ ಕುತಂತ್ರ ನಡೆಸಿ ಸೋಲಿಸಿತು. ಕೊನೆಗೆ ದಲಿತ ನಾಯಕ ಜೋಗೇಂದ್ರನಾಥ್ ಮೊಂಡಲ್ ಅವರ ಒತ್ತಾಯದ ಮೇರೆಗೆ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಿ ಸಂವಿಧಾನ ಸಭೆಗೆ ಆಯ್ಕೆಯಾದರು. ಆದರೆ ಇದನ್ನೂ ಸಹಿಸದ ಕಾಂಗ್ರೆಸ್‌ ಅಂಬೇಡ್ಕರ್‌ ಗೆದ್ದ ಬಹುಸಂಖ್ಯಾತ ಹಿಂದೂಗಳಿದ್ದ ಕ್ಷೇತ್ರಗಳನ್ನೇ ಪಾಕ್‌ಗೆ ಬಿಟ್ಟುಕೊಟ್ಟಿತು ಎಂದು ಸಚಿವ ಜೋಶಿ ದೂರಿದರು.

1952ರಲ್ಲಿ ಮೊದಲ ಲೋಕಸಭಾ ಚುನಾವಣೆಗೆ ಅಂಬೇಡ್ಕರ್‌ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್ ಅಂಬೇಡ್ಕರ್‌ ಸಹಾಯಕನನ್ನೇ ಅಪಹರಿಸಿ ಅವರ ವಿರುದ್ಧ ಎತ್ತಿಕಟ್ಟಿ ಕಣಕ್ಕಿಳಿಸಿತು. ಪ್ರಧಾನಿ ನೆಹರೂ ಎರಡೆರಡು ಬಾರಿ ಪ್ರಚಾರಕ್ಕೆ ಹೋಗಿ ಸೋಲುವಂತೆ ಮಾಡಿದರು. 1954ರಲ್ಲಿ ಬಂಡಾರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಗೆಲ್ಲಲು ಬಿಡಲಿಲ್ಲ ಎಂದರು.

ಅಂಬೇಡ್ಕರ್‌ ಅವರನ್ನು ಪರಾಭವಗೊಳಿಸಿದ ನಾರಾಯಣ ಕಾಟ್ರೋಲ್ಕರ್ ಗೆ 1970ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಟ್ಟ ಕಾಂಗ್ರೆಸ್‌, ಸಂವಿಧಾನ ಶಿಲ್ಪಿಗೆ ಭಾರತ ರತ್ನ ಪುರಸ್ಕಾರ ನೀಡದೆ ಅವಮಾನಿಸಿತು. ಸಂಸತ್‌ ಭವನದಲ್ಲಿ ಅಂಬೇಡ್ಕರ್‌ ತೈಲ ಚಿತ್ರ ಅನಾವರಣಕ್ಕೂ ಬಿಡಲಿಲ್ಲ. ಅಂಬೇಡ್ಕರ್‌ ಅಂತ್ಯಸಂಸ್ಕಾರಕ್ಕೆ ದೆಹಲಿಯಲ್ಲಿ ಸೂಕ್ತ ಜಾಗ ಸಹ ನೀಡಲಿಲ್ಲ ಅಂದಿನ ಕಾಂಗ್ರೆಸ್‌ ಸರ್ಕಾರ. ಕೊನೆಗೆ ಮುಂಬೈನ ಸಮುದ್ರ ತಟದಲ್ಲಿ ಅವರ ಅನುಯಾಯಿಗಳು ಅಂತಿಮ ಸಂಸ್ಕಾರ ನೆರವೇರಿಸಬೇಕಾಯಿತು. ಹೀಗೆ ಅಂಬೇಡ್ಕರ್‌ ಅವರಿಗೆ ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್‌ ಅವಮಾನ ತೋರುತ್ತಲೇ ಬಂದಿದೆ ಎಂದು ಆರೋಪಿಸಿದರು.

http://kalpa.news/wp-content/uploads/2025/03/PES-Video.mp4

1990ರಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್‌ ಸರ್ಕಾರ ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಿತು. ವಾಜಪೇಯಿ ಅವರ ಆಗ್ರಹದ ಮೇರೆಗೆ ಸಂಸತ್‌ ಭವನದಲ್ಲಿ ಅಂಬೇಡ್ಕರ್‌ ಭಾವಚಿತ್ರಕ್ಕೆ ಮನ್ನಣೆ ದೊರಕಿತು. ಅಂಬೇಡ್ಕರ್‌ ಅವರು ಆರ್ಥಿಕ ವಿಷಯದಲ್ಲಿ ಪಿಎಚ್‌ಡಿ ಬರೆದ ದೇಶದ ಮೊದಲ ವ್ಯಕ್ತಿ ಎಂದು ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ಸ್ಮರಿಸಿದರು.

ಅಂಬೇಡ್ಕರ್‌ ಬರೆದ ಪತ್ರವೇ ಇಲ್ಲ!: ನೆಹರು ಅವರ ಸರ್ಕಾರದಲ್ಲಿ ಡಾ.ಅಂಬೇಡ್ಕರ್‌ ಅವರು ರಾಜೀನಾಮೆ ಕೊಡುತ್ತಲೇ ಒಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್‌ ತಮ್ಮನ್ನು ಹೇಗೆ ನಡೆಸಿಕೊಂಡಿದೆ. ಚುನಾವಣೆಯಲ್ಲಿ ಹೇಗೆ ಸೋಲಿಸಿತು ಮತ್ತು ದಲಿತರಿಗೆ, ಒಬಿಸಿಯವರಿಗೆ ಮೀಸಲಾತಿ ಕಲ್ಪಿಸುವಲ್ಲಿ ಅದೆಷ್ಟು ವಿರೋಧ ವ್ಯಕ್ತಪಡಿಸಿತು ಎಂಬ ಅನೇಕ ಸಂಗತಿಗಳುಳ್ಳ ಈ ಪತ್ರವನ್ನು ಇತಿಹಾಸದಲ್ಲಿ ಎಲ್ಲೂ ಲಭ್ಯವಿಲ್ಲದಂತೆ ಮಾಡಿದೆ ಕಾಂಗ್ರೆಸ್‌ ಎಂದು ಆರೋಪಿಸಿದರು.

ಮೀಸಲಾತಿ ವಿರೋಧಿಸಿದವರು ಕಾಂಗ್ರೆಸ್‌ ನಾಯಕರು: ಅಂಬೇಡ್ಕರ್‌ ಅವರು ದಲಿತರಿಗೆ ಸಂವಿಧಾನ ಬದ್ಧ ಮೀಸಲಾತಿ ಕಲ್ಪಿಸಿದರೆ, ಪಂಡಿತ್‌ ನೆಹರು ಅವರು ಅದನ್ನು ವಿರೋಧಿಸಿ ದೇಶದ ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರ ಬರೆದರು. ನಂತರದಲ್ಲಿ ರಾಜೀವ ಗಾಂಧಿ ಅವರೂ ದಲಿತ ಮತ್ತು ಒಬಿಸಿ ಮೀಸಲಾತಿ ವಿರೋಧಿಸಿ ಸುದೀರ್ಘ ಭಾಷಣ ಮಾಡಿದ್ದರು. ಇಂದಿನ ಕಾಂಗ್ರೆಸ್‌ ನಾಯಕರಲ್ಲೂ ಅದೇ ಧೋರಣೆಯಿದೆ. ದಲಿತರನ್ನು, ಓಬಿಸಿಯವರನ್ನು, ಮುಸ್ಲಿಂರನ್ನು ಕೇವಲ ವೋಟ್‌ ಬ್ಯಾಂಕ್‌ ಆಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.

ದಲಿತ ನಾಯಕ ಖರ್ಗೆ ಅವರಿಗೆ ಅವಮಾನ: ದಲಿತ ವಿರೋಧಿ ನೀತಿ ಕಾಂಗ್ರೆಸ್‌ನವರಿಗೆ ನೆಹರು, ರಾಜೀವ ಗಾಂಧಿ ಅವರಿಂದ ರಕ್ತಗತವಾಗಿ ಬಂದಿದೆ. ಹಾಗಾಗಿ ಮೊನ್ನೆ ಮೊನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಅವಮಾನಕರ ರೀತಿಯಲ್ಲಿ ನಡೆಸಿಕೊಂಡಿದ್ದಾರೆ. ಕಾಂಗ್ರೆಸ್‌ ಸಮಾವೇಶದಲ್ಲಿ ಖರ್ಗೆ ಅವರಿಗೆ ಮುಖ್ಯ ಭೂಮಿಕೆಯಲ್ಲಿ ಕುರ್ಚಿ ಕೊಡದೆ, ಎಲ್ಲೋ ಒಂದು ಬದಿಗೆ ಸೋಫಾ ಮೇಲೆ ಕುಳ್ಳಿರಿಸಿ ಒಬ್ಬ ದಲಿತ ನಾಯಕನನ್ನು ಅವಮಾನಿಸಿದ್ದಾರೆ. ದಲಿತ ವಿರೋಧಿ ಮನಸ್ಥಿತಿ ಪ್ರದರ್ಶಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
“ಭೀಮ ಹೆಜ್ಜೆʼಗೆ ಕಡೆಗಣಿಸಿದ ರಾಜ್ಯ ಸರ್ಕಾರ: ಮಹಾತ್ಮಗಾಂಧಿ ಅವರು ಬೆಳಗಾವಿಗೆ ಬಂದು ಹೋದ ನೆನಪಿಗೆ “ಶತಮಾನ ಸಂಭ್ರಮʼ ಆಚರಿಸಿದ ಕಾಂಗ್ರೆಸ್‌ ಸರ್ಕಾರ, ಅದೇ ಬೆಳಗಾವಿಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಬಂದು ಹೋದ ನೆನಪಿಗೆ ʼಶತಮಾನ ಸಂಭ್ರಮʼ ಆಚರಿಸದೆ “ಅವಮಾನ ಸಾಂಪ್ರದಾಯʼವನ್ನು ಮುಂದುವರಿಸಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಮಹಾತ್ಮ ಗಾಂಧಿ ಅವರ ಶತಮಾನ ಸಂಭ್ರಮವೇ ಆಗಲಿ, ಅಂಬೇಡ್ಕರ್‌ ಅವರ “ಭೀಮ ಹೆಜ್ಜೆʼ ಸಂಭ್ರಮವೇ ಆಗಲಿ ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ಕರೆದು, ದಲಿತ ನಾಯಕರು ಮತ್ತು ದಲಿತ ಚಿಂತಕರನ್ನು ಕರೆದು ಚರ್ಚಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ, ಸರ್ಕಾರ ಮಹಾತ್ಮಾ ಗಾಂಧಿ ಅವರ ಶತಮಾನ ಸಮಾರಂಭವನ್ನು ಪಕ್ಷದ ಒಂದು ಸಮಾವೇಶದ ರೀತಿ ಆಚರಿಸಿದರೆ, ಭೀಮ ಹೆಜ್ಜೆಯನ್ನು ಸಂಪೂರ್ಣ ಕಡೆಗಣಿಸಿದೆ ಎಂದು ಸಚಿವ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿಯಿಂದ 5 ದಿನ ಭೀಮ ಹೆಜ್ಜೆ ಕಾರ್ಯಕ್ರಮ: 100 ವರ್ಷಗಳ ಹಿಂದೆ 1925ರಲ್ಲಿ ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ಏ.10, 11ರಂದು ಎರಡು ದಿನಗಳ ಕಾಲ ನಡೆದ ಹಿತಕಾರಿಣಿ ಸಭಾದ ಅಧಿವೇಶನದ ಅಧ್ಯಕ್ಷತೆ ವಹಿಸಿ ಭಾಷಣ ಮಾಡಿದ್ದರು. ಈ ಐತಿಹಾಸಿಕ ದಿನದ ನೆನಪಾಗಿ “ಭೀಮ ಹೆಜ್ಜೆʼ ಶತಮಾನದ ಸಂಭ್ರಮ. ಆಚರಿಸುತ್ತಿದ್ದು, ನಿರಂತರ ಐದು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿದೆ. 15ರಂದು ನಿಪ್ಪಾಣಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಪ್ರಯುಕ್ತ ಬೆಂಗಳೂರಿನಿಂದ ನಿಪ್ಪಾಣಿವರೆಗೆ ಬೈಕ್ ಜಾಥಾ ನಡೆಸಲಾಗುತತ್ತಿದೆ ಎಂದು ಸಚಿವ ಜೋಶಿ ತಿಳಿಸಿದರು.

ಬೆಂಗಳೂರಿನಲ್ಲಿ ಭೀಮ ಹೆಜ್ಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೇಳೆ ವಿಪಕ್ಷ ನಾಯಕರಾದ ಆರ್‌.ಅಶೋಕ್‌, ಚಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಹಾಗೂ ವಿವಿಧ ದಲಿತ ನಾಯಕರು, ಮುಖಂಡರು ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4
Tags: AmbedkarBangaloreKannada News WebsiteKannada_NewsKannada_News_LiveKannada_News_OnlineKannada_WebsiteLatest News KannadaNews_in_KannadaNews_KannadaPralhad Joshiಅಂಬೇಡ್ಕರ್ಕೇಂದ್ರ ಸಚಿವ ಪ್ರಲ್ಹಾದ ಜೋಶಿಬೆಂಗಳೂರು
Share196Tweet123Send
Previous Post

ನ್ಯಾಯಾಲಯದ ಆದೇಶ ಉಲ್ಲಂಘನೆ | ಯೂಟ್ಯೂಬರ್ ಸಮೀರ್ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲು

Next Post

ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ | ಸಿಎಂ ಸಿದ್ದರಾಮಯ್ಯ ವಿವರಿಸಿದ್ದು ಹೀಗೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಮೇಕೆದಾಟು, ಕಳಸ-ಬಂಡೂರಿ ಯೋಜನೆ ಬಗ್ಗೆ ಸಿಎಂ ಹೇಳಿದ್ದೇನು? ನೀರಾವರಿಗೆ ಬಜೆಟ್’ನಲ್ಲಿ ಸಿಕ್ಕಿದ್ದೇನು?

ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣ | ಸಿಎಂ ಸಿದ್ದರಾಮಯ್ಯ ವಿವರಿಸಿದ್ದು ಹೀಗೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

ಹುಲಿಕಲ್ ಘಾಟಿಯಲ್ಲಿ ಭಾರೀ ದುರಂತ | ಧರೆ ಕುಸಿದು ಮೂವರು ಕಾರ್ಮಿಕರ ಸಾವು

April 9, 2026
ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

ಪಿಯುಸಿ ರಿಸಲ್ಟ್ | ಪೇಸ್ ಕಾಲೇಜಿನ ವಿದ್ಯಾರ್ಥಿನಿ ಮಹಿನ್ ರಾಜ್ಯಕ್ಕೆ 3, ಜಿಲ್ಲೆಗೆ ಪ್ರಥಮ ಸ್ಥಾನ

April 9, 2026
ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

ದೇಶ ಸಮೃದ್ಧಿಯಾದಾಗ ನಾವೆಲ್ಲರೂ ಸಮೃದ್ಧಿ: ಸಂಸದ ರಾಘವೇಂದ್ರ

April 9, 2026
`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

`ನಾನು ಕರುಣಾಕರ್’ ಚಿತ್ರನೋಡಿ, ಹೊಸ ಪ್ರತಿಭೆಗಳನ್ನು ಬೆಂಬಲಿಸಿ: ನಿರ್ಮಾಪಕ ನಮನ್ ನಾರಾಯಣ್ ಸಂತೋಷ್

April 9, 2026
ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

ಪಿಯುಸಿ ರಿಸಲ್ಟ್ | ಕುಮದ್ವತಿ ಕಾಲೇಜಿಗೆ ಶೇ.100 ರಷ್ಟು ಫಲಿತಾಂಶ | ಹೆಮ್ಮೆಯ ವಿದ್ಯಾರ್ಥಿಗಳಿವರು

April 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL