ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಓದಿನ ಖುಷಿ ಹೆಚ್ಚಿಸುವ ಮತ್ತು ಲೇಖಕರನ್ನು ಗೌರವಿಸುವ ಅಂಗವಾಗಿ 1995ರಿಂದ ವಿಶ್ವಸಂಸ್ಥೆ ಖ್ಯಾತ ಸಾಹಿತಿ ನಾಟಕಕಾರ ವಿಲಿಯಂ ಶೇಕ್ಸ್ಪಿಯರ್ ಸ್ಮರಣಾರ್ಥ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮಿಯ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದು ಅಂಕಣಕಾರ, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ
ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರು ದಕ್ಷಿಣ ವಲಯ ನಗರ ಕೇಂದ್ರ ಗ್ರಂಥಾಲಯ, ಕುಮಾರಸ್ವಾಮಿ ಬಡಾವಣೆಯ ಗ್ರಂಥದ ಗುಡಿಯಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನಾಚರಣೆ ಅಂಗವಾಗಿ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮನುಜ ಕುಲಕೆ ದೇವ ಕೊಟ್ಟ ಕೊಡುಗೆ ಮಾತುˌಮಂಥನˌ ಭಾಷೆ ಹಾಗೂ ಬರವಣಿಗೆ
ತಲೆತಲಾಂತರದಿಂದ ಪರಂಪರಾನುಗತವಾಗೆ
ಗ್ರಂಥಗಳಲಿ ಬೆಳಗುತ್ತಾ ಬಂದಿದೆ ಜ್ಞಾನದೀವಿಗೆ.
ಪುಸ್ತಕದ ಅರಿವು ಮಸ್ತಕಕೆ ಬರಬೇಕು ಬಾಳಲ್ಲಿ ಅಳವಡಿಸಿಕೊಳ್ಳುವ ಜಾಣ್ಮೆ ಬೇಕು
ಇವು ಹಿರಿಯರ ನಡೆ ನುಡಿ ಆಲೋಚನೆಗಳ ಕನ್ನಡಿ
ಜೀವನದ ಪಟ್ಟುಗಳ ತಿಳಿಸಿಕೊಡುವ ಕುಸ್ತಿ ಗರಡಿ.
ಹೊತ್ತಿಗೆಗಳಿಗಿಂತ ಆಪ್ತಮಿತ್ರ ಬೇರೊಂದಿಲ್ಲ ಇವುಗಳಿಗಿಂತ ಹೆಚ್ಚಿನ ಆಸ್ತಿ ಮತ್ತೊಂದಿಲ್ಲ ಬೆಳೆಸಿಕೊಳ್ಳಿ ಉಳಿಸಿಕೊಳ್ಳಿ ಅದಮ್ಯ ಓದಿನ ಪ್ರೀತಿ ಆಗ ಬಾಳಲಿ ಅಂಧಕಾರವಿಲ್ಲˌ ಬರೀ ಸುಜ್ಞಾನ ಜ್ಯೋತಿ ಎಂದು ಅಭಿಪ್ರಾಯಪಟ್ಟರು
ಕುಮಾರಸ್ವಾಮಿ ಬಡಾವಣೆಯ ಪ್ರಶಾಂತ ಪರಿಸರದಲ್ಲಿ ಬಹು ವಿಶಿಷ್ಟ ರೀತಿಯಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ಓದುಗಸ್ನೇಹಿಯಾಗಿ ರೂಪಿಸಿರುವ ಗ್ರಂಥಾಲಯದ ಪ್ರಭಾರದಾರರಾದ ಎಸ್ ಆನಂದ್ ರವರ ಸೇವಾ ಮನೋಭಾವದ ಕಾರ್ಯ ಅನುಕರಣಿಯ ಎಂದು ಹರ್ಷ ವ್ಯಕ್ತಪಡಿಸಿದರು.
Also read: ಇವುಗಳ ಉಳಿವಿಗೆ ನನ್ನ ಸ್ಪರ್ಧೆ | ಕೆ.ಎಸ್. ಈಶ್ವರಪ್ಪ ಹೇಳಿದ ಪ್ರಮುಖ ಅಂಶಗಳು ಹೀಗಿವೆ
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಳಲು ವಾದಕ ವಿದ್ವಾನ್ ವೆಂಕಟೇಶ ಸತ್ಯನಾರಾಯಣ , ವೇಣು ವಾದನ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೆಲ್ಲನೆಸ್ಸ್ ಕೋಚ್ ಯೋಗೇಶ್ ಹಾಗೂ ಲೇಖಕ ವಿ ಎಸ್ ಕುಮಾರ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post