ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ #Renukaswamy Murder Case ನಟ ದರ್ಶನ್ ಬಂಧನಕ್ಕೆ ಒಳಗಾಗಿರುವ ಬೆನ್ನಲ್ಲೇ ಅವರ ಪತ್ನಿ ವಿಜಯಲಕ್ಷ್ಮಿ #Vijayalakshmi ಅವರು ತಮ್ಮ ಪತಿಯನ್ನು ಇನ್‌ಸ್ಟಾದಲ್ಲಿ ಅನ್ ಫಾಲೋ ಮಾಡಿ, ಅವರೊಂದಿಗಿನ ಡಿಪಿಯನ್ನು ಡಿಲೀಟ್ ಮಾಡಿದ್ದಾರೆ.
ಈ ಮೂಲಕ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್’ಗೆ ಅವರ ಪತ್ನಿಯಿಂದಲೂ ಸಹ ಶಾಕ್ ದೊರೆತಂತಾಗಿದೆ.
ದರ್ಶನ್ #Darshan ಅವರು ಪವಿತ್ರಾ ಗೌಡರ #Pavithra Gowda ವಿಚಾರದಲ್ಲಿ ಹಲವು ಬಾರಿ ಎಡವಟ್ಟು ಮಾಡಿಕೊಂಡಿದ್ದರು. ಅದೇ ಪವಿತ್ರಾ ವಿಚಾರದಲ್ಲಿಯೇ ದರ್ಶನ್’ಗೆ ಅತ್ಯಂತ ದೊಡ್ಡ ಹಾಗೂ ಘನಘೋರ ಆರೋಪ ಎದುರಾಗಿ ಪೊಲೀಸ್ ಕಸ್ಟಡಿಯಲ್ಲಿ ಸಿಲುಕಿದ್ದಾರೆ.
Also read: ನಟ ದರ್ಶನ್ ಮೇಲೆ ರೌಡಿ ಶೀಟ್ ಓಪನ್? ಗೃಹ ಸಚಿವ ಪರಮೇಶ್ವರ್ ಬಿಗ್ ಸ್ಟೇಟ್ಮೆಂಟ್
ಕಳೆದ ಎರಡು ಮೂರು ತಿಂಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿಯವರು ಇನ್’ಸ್ಟಾದಲ್ಲಿ ಪವಿತ್ರಾ ಗೌಡ ಪತಿ ಹಾಗೂ ಮಗಳ ಬಗ್ಗೆ ಫೋಟೋಗಳನ್ನು ಶೇರ್ ಮಾಡಿ ಮಾತಿನ ದಾಳಿ ನಡೆಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post