ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಸಾಹಿತ್ಯದಲ್ಲಿ 25ಕ್ಕೂ ಹೆಚ್ಚು ಕೃತಿಗಳನ್ನು ನೀಡಿರುವ ವಿಶಿಷ್ಟ ಸಾಹಿತ್ಯ ಸಾಧಕರು ಜನಪ್ರಿಯ ಪ್ರಾಧ್ಯಾಪಕರು,ಉತ್ತಮ ವಾಗ್ಮಿಗಳು, ಶ್ರೇಷ್ಠ ಸಂಘಟಕರು,ವಿದ್ಯೆ -ವಿನಯ- ವಿವೇಕ -ಪಾಂಡಿತ್ಯ ಪ್ರತಿಭೆಗಳ ಸಂಗಮ ಡಾ. ವಾದಿರಾಜರವರ ಸಾಂಸ್ಕೃತಿಕ ಪರಿಚಾರಿಕೆಯನ್ನು ಗುರುತಿಸಿ ‘ದಾಸಧೇನು ದಂಪತಿ -2024 ‘ ಪ್ರಶಸ್ತಿ ಸಂದಾಯವಾಗಿರುವುದು ಅವರ ಕ್ರಿಯಾಶೀಲತೆಗೆ ಮತ್ತೊಂದು ಗರಿ ಎಂದು ಹರಿದಾಸ ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಪ್ರಾಯಪಟ್ಟರು
ಬೆಂಗಳೂರಿನ ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಕುವೆಂಪು ಸಭಾಂಗಣದಲ್ಲಿ ಗಿರಿನಗರದ ಸ್ನೇಹಕೂಟ ಸಾಂಸ್ಕೃತಿಕ ವೇದಿಕೆ ಹಾಗೂ ಸೇಡಂನ ದಾಸಧೇನು ಟ್ರಸ್ಟ್ ಸಹಯೋಗದಲ್ಲಿ ಪ್ರಾಧ್ಯಾಪಕ ಲೇಖಕ ವಿಮರ್ಶಕ ಡಾ. ಆರ್ ವಾದಿರಾಜು ಮತ್ತು ಲಕ್ಷ್ಮಿ ರವರಿಗೆ ದಾಸಧೇನು ಟ್ರಸ್ಟ್ ವತಿಯಿಂದ ಕೊಡ ಮಾಡುವ ‘ದಾಸಧೇನು ದಂಪತಿ -2024 ‘ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೆಕೆ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್ ಪ್ರಕಟಪಡಿಸಿರುವ ಡಾ. ವಾದಿರಾಜು ರವರ ವಿಮರ್ಶಾ ಲೇಖನಗಳ ಸಂಕಲನ ‘ಅನೇಕ ‘ ಕೃತಿಯನ್ನು ಖ್ಯಾತ ಕಾದಂಬರಿಕಾರ ಡಾ. ಸುರೇಶ ಪಾಟೀಲ ಅನಾವರಣಗೊಳಿಸಿ ದಾಸ ಸಾಹಿತ್ಯದ ಭಕ್ತಿ ಸಾಧನೆ, ವಚನ ಸಾಹಿತ್ಯದ ಸಂವೇದನಾಶೀಲತೆ, ಸಾಹಿತ್ಯದ ಸಂಸ್ಕೃತಿ ದರ್ಶನ ಈ ಕೃತಿಯಲ್ಲಿ ಮೂಡಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪ್ರಕಾಶಕ ಶಿವರಾಂ ಪ್ರಾಧ್ಯಾಪಕ ಡಾ. ಪ್ರಹ್ಲಾದ ರೆಡ್ಡಿ ಆಯೋಜಕರಾದ ಡಾ.ಎಸ್ ರಾಮಲಿಂಗೇಶ್ವರ (ಸಿಸಿರಾ ),ಡಾ. ಚೌಡಯ್ಯ,ಡಾ. ಡಿ ಮುರಳಿಧರ, ಡಾ. ಪಿ.ನಟರಾಜ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಬಸವ ಜಯಂತಿ ಪ್ರಯುಕ್ತ ಹಲವಾರು ಕವಿ- ಕವಿಯತ್ರಿಯರಿಂದ ಕವನ ಗೋಷ್ಠಿ ಮತ್ತು ಗೀತ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
Discussion about this post