ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೈಂಗಿಕ ಕಿರುಕುಳ ಹಾಗೂ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ #Prajwal Revanna ಅವರು ಮೇ 31ರಂದು ಭಾರತಕ್ಕೆ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತಂತೆ ತಾವು ಇರುವ ದೇಶದಿಂದಲೇ ವೀಡಿಯೋ ಸಂದೇಶ ಹರಿಬಿಟ್ಟಿರುವ ಪ್ರಜ್ವಲ್ ರೇವಣ್ಣ, ಮೇ 31ರಂದು ಭಾರತಕ್ಕೆ ಆಗಮಿಸಿ, ಎಸ್’ಐಟಿ ತನಿಖೆಯನ್ನು ಎದುರಿಸಲಿದ್ದೇನೆ ಎಂದಿದ್ದಾರೆ.

Also read: ಡಾ.ಧನಂಜಯ ಸರ್ಜಿಯಂತಹ ಪ್ರಾಮಾಣಿಕರ ಅಗತ್ಯ ರಾಜಕಾರಣಕ್ಕಿದೆ: ಬಿ.ವೈ. ವಿಜಯೇಂದ್ರ
ಪ್ರಕರಣಕ್ಕೆ ಸಂಬಂಧಿಸಿದಂತೆ ತಾತ, ತಂದೆ, ತಾಯಿ, ಕುಮಾರಣ್ಣ ಅವರಿಗೆ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೇ ವಿರೋಧಿಗಳು ಇಂತಹ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ದೇಶದ ಕಾನೂನಿಗೆ ಗೌರವ ನೀಡಿ ವಾಪಾಸ್ ಬಂದು, ತನಿಖೆ ಎದುರಿಸಲಿದ್ದೇನೆ ಎಂದಿದ್ದಾರೆ.

ಈ ಅವಧಿಯಲ್ಲಿ ಎರಡು ಬಾರಿ ಪ್ರಜ್ವಲ್ ದೇಶಕ್ಕೆ ಆಗಮಿಸುವ ಸಾಧ್ಯತೆಯಿದೆ ಎಂದು ವಿಮಾನ ನಿಲ್ದಾಣದಲ್ಲಿ ಎಸ್’ಐಟಿ ಅಧಿಕಾರಿಗಳು ಕಾದು ಕಾದು ಸುಸ್ತಾಗಿದ್ದರು. ಆದರೆ, ಈಗ ಸ್ವತಃ ಪ್ರಜ್ವಲ್ ಅವರೇ ತಾವು ವಾಪಾಸ್ ಬರುವುದಾಗಿ ವೀಡಿಯೋ ಮೂಲಕ ಮಾಹಿತಿ ಹರಿಬಿಟ್ಟಿದ್ದು, ತಾವು ಹೇಳಿದಂತೆಯೇ ಮೇ 31ರಂದು ವಾಪಾಸ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news      
                                                 
 
	    	








 Loading ...
 Loading ... 
							



 
                
Discussion about this post